* ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಹೈಕೋರ್ಟ್
* ಧರ್ಮ ಸೂಚಕ ವಸ್ತ್ರಗಳನ್ನ ಬಳಸುವಂತಿಲ್ಲ
* ಹಿಜಾಬ್‌ಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ
ಬೆಂಗಳೂರು(ಮಾ.17): ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನ ನಡೆಸಿದ್ದ ತ್ರಿಸದಸ್ಯ ಪೀಠ ಮಹತ್ವದ ತೀರ್ಪನ್ನ ನೀಡಿದೆ. ಆಯಾ ಶಾಲೆ ಮತ್ತು ಕಾಲೇಜುಗಳು ನಿಗದಿ ಮಾಡಿರುವ ಸಮವಸ್ತ್ರಗಳನ್ನ ಹೊರತುಪಡಿಸಿ ಹಿಜಾಬ್ ಸೇರಿ ಮತ್ಯಾವುದೇ ಧರ್ಮ ಸೂಚಕ ವಸ್ತ್ರಗಳನ್ನ ಬಳಸುವಂತಿಲ್ಲ ಅಂತ ಆದೇಶ ನೀಡಿದೆ. ಹೈಕೋರ್ಟ್‌ನಿಂದ ಆದೇಶ ಹೊರಬೀಳುತ್ತಿದ್ದಂತೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ಕರೆದು ಆದೇಶದ ವಿರುದ್ಧ ಧ್ವನಿ ಎತ್ತಿದ್ದಾರೆ.
James: ಜೇಮ್ಸ್ ಜಾತ್ರೆ ಶುರು, ಮೊದಲ ದಿನ ಮೊದಲ ಶೋ ವೀಕ್ಷಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್