
ಅಪ್ಪ ಕಾಂಗ್ರೆಸ್ ಶಾಸಕ.. ಅಪ್ಪನ ಅಧಿಕಾರ ಬಲದಲ್ಲಿ ಮಗನ ದಬ್ಬಾಳಿಕೆ, ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಪುತ್ರ ಬಸವೇಶ್ ಅಂಧಾ ದರ್ಬಾರ್, ದೆಹಲಿಯಲ್ಲಿ ಇರುವ ಬಿಜೆಪಿ ರೆಬೆಲ್ಸ್ ನಾಯಕರಿಗೆ ಬಿಗ್ ಶಾಕ್, ದೆಹಲಿಯಲ್ಲಿ ಇರುವ ರೆಬೆಲ್ಸ್ ನಾಯಕರಿಗೆ ಬಿಗ್ ಶಾಕ್ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಶಿವಮೊಗ್ಗದ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಪುತ್ರ ಬಸವೇಶ್ ದರ್ಬಾರ್ ವಿಡಿಯೋ ಒಂದು ಭಾರಿ ಕೋಲಾಹಲ ಸೃಷ್ಟಿಸಿದೆ. ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದಿಸಿರುವ ವಿಡಿಯೋ ಇದಾಗಿದೆ. ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ಬಾಯಿಗೆ ಬಂದಂತೆ ಬೈದಿದ್ದಾರೆ. ಭದ್ರಾವತಿ ಭದ್ರಾ ನದಿತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಗಣಿ ಇಲಾಖೆಯ ವಿಜ್ಞಾನಿ ಜ್ಯೋತಿ ನಿನ್ನೆ ಮಧ್ಯರಾತ್ರಿ ದಾಳಿ ಮಾಡಿದ್ದರು. ಈ ವೇಳೆ ನಡೆದ ಘಟನೆಯ ವಿಡಿಯೋ ಲಭ್ಯವಾಗಿದೆ.