ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ನೀಡುವ ಕರ್ನಾಟಕ ಬಿಸ್ನೆಸ್ ಅವಾರ್ಡ್ ಪ್ರಶಸ್ತಿಗೆ ಸಾಮಾಜಿಕ ಕಾರ್ಯಕರ್ತ ಸಿಆರ್ ನಾಸಿರ್ ಅಹಮ್ಮದ್ ಭಾಜನರಾಗಿದ್ದಾರೆ. 10 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಬುಕ್, ಪೆನ್, ಪಠ್ಯಗಳನ್ನು ನೀಡಿ ನೆರವಾಗಿದ್ದಾರೆ. ಹೆಣ್ಣುಮಕ್ಕಳ ಮದುವೆ ಸೇರಿದಂತೆ ಹಲವು ಕುಟುಂಗಳಿಗೆ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನಾಸಿರ್ ಅಹಮ್ಮದ್ ಪ್ರಶಸ್ತಿ ಕುರಿತು ಮಾತನಾಡಿದ್ದಾರೆ.