Nov 20, 2024, 11:33 PM IST
ಬೆಂಗಳೂರು (ನ.20): ಸರ್ಕಾರಕ್ಕೆ ಹೊರೆಯಾಗಿರುವ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಿದರೆ ಜನಾಕ್ರೋಶಕ್ಕೆ ತುತ್ತಾಗುವ ಅಪಾಯವನ್ನು ಅರಿತ ರಾಜ್ಯ ಸರ್ಕಾರ ಈಗ ಹಿಂಬಾಗಿಲ ಮೂಲಕ ಇದನ್ನು ರದ್ದು ಮಾಡುವ ಪ್ರಯತ್ನ ಮಾಡುತ್ತಿದೆ. ಬಹುತೇಕ ಗ್ಯಾರಂಟಿ ಯೋಜನೆಗಳಿಗೆ ಮೂಲಾಧಾರವಾಗಿರುವ ಬಿಪಿಎಲ್ ಕಾರ್ಡ್‌ಗಳನ್ನೇ ರದ್ದು ಮಾಡಿ ಅವುಗಳನ್ನು ಎಪಿಎಲ್ ಕಾರ್ಡ್ ಮಾಡುವ ಯೋಜನೆ ರೂಪಿಸಿದೆ.
ಆದಾಯ ತೆರಿಗೆ ಪಾವತಿ ಮಾಡುವವರು ಹಾಗೂ ಸರ್ಕಾರಿ ಉದ್ಯೋಗಿಗಳ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದೇವೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದರೂ, ತಳ ಮಟ್ಟದಲ್ಲಿ ದೀನರ, ಬಡ-ಬಲ್ಲಿದರ ಕಾರ್ಡ್‌ಗಳೇ ಹೆಚ್ಚಾಗಿ ರದ್ದಾಗಿ ಎಪಿಎಲ್ ಕಾರ್ಡ್‌ಗಳಾಗುತ್ತಿವೆ. ಇದರ ಬೆನ್ನಲ್ಲಿಯೇ ಸರ್ಕಾರದ ಈ ನಡೆಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡುವ ವೇಳೆ ಅಗತ್ಯವಿರುವ ಬಡವರಿಗೂ ಸರ್ಕಾರ ಬರೆ ಹಾಕಿದೆ. ಕೂಲಿ ಮಾಡುವ ಸಾವಿರಾರು ವ್ಯಕ್ತುಗಳ ಅನ್ನಕ್ಕೂ ರಾಜ್ಯ ಸರ್ಕಾರ ಕೈಹಾಕಿದೆ. ಕಾರು,ಮನೆ,ಜಮೀನು ಇಲ್ಲದಿದ್ದರೂ ಕಾರ್ಡ್ ರದ್ದು ಮಾಡಲಾಗಿದೆ.