ಸೂರ್ಯನನ್ನೇ ತಡೆದಿದ್ದೇ ಎಂದಿದ್ದ ನಿತ್ಯಾನಂದನಿಗೆ ಈಗ ಸಾವಿನ ಭಯ!

ಸೂರ್ಯನನ್ನೇ ತಡೆದಿದ್ದೇ ಎಂದಿದ್ದ ನಿತ್ಯಾನಂದನಿಗೆ ಈಗ ಸಾವಿನ ಭಯ!

Published : Sep 04, 2022, 09:49 PM IST

ನಾನೇ ದೇವ್ರು, ಅಷ್ಟದಿಕ್ಕುಗಳನ್ನೇ ನಾನು ಬಂಧಿಸಬಲ್ಲೆ ಎಂದೆಲ್ಲಾ ಹೇಳುತ್ತಿದ್ದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನಿಗೆ ಈಗ ಸಾವಿನ ಭಯ ಶುರುವಾಗಿದೆ. ನನಗೆ ವೈದ್ಯರ ಸೇವೆ ಬೇಕಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.
 

ಬೆಂಗಳೂರು (ಸೆ.4): ಸ್ವಯಂ ಘೋಷಿತ ದೇವಮಾನವ ಎಂದೇ ಕರೆಸಿಕೊಂಡಿದ್ದ ನಿತ್ಯಾನಂದನಿಗೆ ಈಗ ಸಾವಿನ ಭಯ ಶುರುವಾಗಿದೆ. ನಾನೇ ದೇವ್ರು ನನಗೆ ಯಾರ ಭಯವೂ ಇಲ್ಲ ಎಂದು ಓಡಾಡಿಕೊಂಡಿದ್ದ ನಿತ್ಯಾನಂದ ಸಮಾಧಿ ಸೇರಿಕೊಂಡಿದ್ದಾಗಿ ಹೇಳಿದ್ದ. ಈಗ ಸಮಾಧಿಯಿಂದಲೇ ಮತ್ತೊಂದು ಸಂದೇಶ ಬಂದಿದೆ ಎಂದು ಹೇಳಿಕೊಂಡಿದ್ದು, ನನ್ನನ್ನು ಕಾಪಾಡಿ ಎನ್ನುವ ಸಂದೇಶ ಬಂದಿದೆಯಂತೆ.

ಸಮಾಧಿಯಲ್ಲಿರುವ ನಿತ್ಯಾನಂದನಿಗೆ ಈಗ ವೈದ್ಯರ ಸೇವೆ ಬೇಕಾಗಿದೆ ಎಂದು ಹೇಳಿದ್ದಾನೆ. ಅಷ್ಟದಿಕ್ಕುಗಳನ್ನೇ ಬಂಧಿಸಿದ್ದವನು, ಸೂರ್ಯನನ್ನೇ ತಡೆದಿದ್ದೆ ಎಂದು ಹೇಳಿದ್ದ ನಿತ್ಯಾನಂದ ಸ್ವಾಮಿಗೆ ಈಗ ಜೀವ ಭಯ ಶುರುವಾಗಿದೆ. ಕಾಪಾಡಿ ಎಂದು ನಿತ್ಯಾನಂದ (Nithyananda) ಶ್ರೀಲಂಕಾಕ್ಕೆ (Sri Lanka) ಕೇಳಿದ್ದಾರೆ.  ಅತ್ಯಾಚಾರ-ಆರೋಪಿ ನಿತ್ಯಾನಂದ ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದು, ತನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿಸುವ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕೋರಿದ್ದಾರೆ.

Nithyananda Life in Danger: ಶ್ರೀಲಂಕಾದಲ್ಲಿ ವೈದ್ಯಕೀಯ ಆಶ್ರಯ ಪಡೀತಾರಾ ಸ್ವಯಂಘೋಷಿತ ದೇವಮಾನವ..?

ಅತ್ಯಾಚಾರ-ಆರೋಪಿ ನಿತ್ಯಾನಂದ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಮತ್ತು ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರದ ಉನ್ನತ ಮೂಲವು  ದೃಢಪಡಿಸಿದೆ. ಆಗಸ್ಟ್ 2022 ರಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ಪತ್ರ ಬರೆದಿದ್ದಾರೆ.

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more