ಎಚ್‌ಡಿಕೆ ಮನನೋಯಿಸುವ ಹೇಳಿಕೆಯನ್ನು ನಾನು ಕೊಟ್ಟಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ.
ಬೆಂಗಳೂರು (ಜು. 10):ವಿರುದ್ಧ ವಾಗ್ದಾಳಿ ನಡೆಸಿದ್ದ ರಾಕ್‌ಲೈನ್ ವೆಂಕಟೇಶ್ ಮನೆ ಎದುರು ಇಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಕ್‌ಲೈನ್, ಎಚ್‌ಡಿಕೆ ಮನನೋಯಿಸುವ ಹೇಳಿಕೆಯನ್ನು ನಾನು ಕೊಟ್ಟಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ನಮ್ಮ ಮನೆ ಮುಂದೆ ಪ್ರತಿಭಟನೆ ಮಾಡಿ ಹೆದರಿಸುತ್ತೀರಾ..? ಅಂಬಿ ಅಭಿಮಾನಿಗಳೂ ನಮ್ಮ ಮನೆ ಮುಂದೆ ಬರುತ್ತೇವೆ ಎಂದರು. ನಾವು ಅದಕ್ಕೆ ಒಪ್ಪಲಿಲ್ಲ. ನನಗೂ ಮನೆ ಮುಂದೆ ಪ್ರತಿಭಟನೆ ಮಾಡಿಸೋದು ಗೊತ್ತಿದೆ. ನಾವು ಕಾನೂನಿನ ಹೋರಾಟ ಮಾಡುತ್ತೇವೆ' ಎಂದಿದ್ದಾರೆ.