Karnataka Bandh: ಕನ್ನಡಮ್ಮನಿಗೆ ಬೈದ್ರೆ ಸಾಯ್ಸೋಕು ಹೇಸಲ್ಲ: ಅದಿತಿ ಪ್ರಭುದೇವ

Dec 23, 2021, 9:23 AM IST

ಬೆಂಗಳೂರು(ಡಿ.23):  ಎಂಇಎಸ್‌ ದಬ್ಬಾಳಿಕೆ ಹಾಗೂ ಪುಂಡಾಡಿಕೆಯನ್ನ ವಿರೋಧಿಸಿ ಡಿ.31ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಕರೆ ನೀಡಿದ್ದಾರೆ. ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಬಂದ್‌ ಇರಲಿದೆ. 
*  ಕರ್ನಾಟಕ ಬಂದ್‌ಗೆ ಕನ್ನಡ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ ಮೂಡಿದೆ. ಬಂದ್‌ಗೆ ನಿಗದಿಯಾಗಿದ್ದ ಸಭೆಯಲ್ಲಿ ಭಾರೀ ಹೈಡ್ರಾಮ ನಡೆದಿದೆ. ಬಂದ್‌ಗೆ ಬೆಂಬಲವಿಲ್ಲ ಅಂತ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.
* ಕರ್ನಾಟಕದಲ್ಲಿ ಎಂಇಎಸ್‌ ನಿಷೇಧ ಮಾಡಲೆಬೇಕು, ನಿಷೇಧ ಮಾಡದೆ ಬೇರೆ ಮಾರ್ಗವೇ ಇಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಕೂಡಲೇ ಈ ಬಗ್ಗೆ ತೀರ್ಮಾಣ ಮಾಡಬೇಕು. ಎಂಇಎಸ್‌ ನಿಷೇಧ ಮಾಡೋವರೆಗೂ ಹೋರಾಟ ನಡೆಯಲಿದೆ. ರಾಜ್ಯ ಸರ್ಕಾರಕ್ಕೆ ಡಿ.29 ರ ಗಡುವು ಕೊಟ್ಟಿದ್ದಾರೆ ವಾಟಾಳ್‌ ನಾಗರಾಜ್‌

News Hour: ಕರ್ನಾಟಕ ಬಂದ್‌ಗೆ ಕರೆ,  ಜನರು ಏನಂತಾರೆ?

*  ಕರ್ನಾಟಕ ಬಂದ್‌ಗೆ ಕನ್ನಡ ಸಂಘಟನೆಗಳ ಬಲ ಸಿಕ್ಕಿದೆ. ಹೌದು, ಬಂದ್‌ 35 ಸಂಘಟನೆಗಳ ಬೆಂಬಲ ಸಿಗುವ ಸಾಧ್ಯತೆ ಇದೆ ಅಂತ ತಿಳಿದು ಬಂದಿದೆ. 
* ಕನ್ನಡಮ್ಮನಿಗೆ ಬೈದರೆ ಸಾಯ್ಸೋಕು ಹೇಸಲ್ಲ ಅಂತ ಚಲನಚಿತ್ರ ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ. ಡಿ.31 ರ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿವುದಾಗಿ ಸ್ಪಷ್ಟಪಡಿಸಿದ್ದಾರೆ.
* ಗಡಿ ಭಾಗದಲ್ಲಿ ಎಂಇಎಸ್‌ ಕಾರ್ಯಕರ್ತರ ಪುಂಡಾಟ ಮಿತಿಮೀರಿದೆ. ಕನ್ನಡಿಗರ ಎದುರೇ ಕನ್ನಡ ಬಾವುಟ ಸುಟ್ಟು ಗೂಂಡಾ ವರ್ತನೆ ತೋರಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ  ಶಿವಸೇನೆ ಮುಖಂಡರು ನಿಂದಿಸಿದ್ದಾರೆ.