ಬೆಂಗಳೂರು ಉಸ್ತುವಾರಿಗಾಗಿ ಫೈಟ್, ಅಶೋಕ್ ವಿರುದ್ಧ ಬಿಜೆಪಿ ಶಾಸಕರೇ ತಿರುಗಿ ಬಿದ್ದಿದ್ಯಾಕೆ..?

Oct 10, 2021, 2:53 PM IST

ಬೆಂಗಳೂರು (ಅ. 10):  ನಗರ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ರಾಜ್ಯ ರಾಜಧಾನಿಯ ಬಿಜೆಪಿ ಶಾಸಕರು, ಸಚಿವರು ಹಾಗೂ ಕಂದಾಯ ಸಚಿವ ಆರ್‌.ಅಶೋಕ್‌ ನಡುವಿನ ಮುಸುಕಿನ ಗುದ್ದಾಟ ವಿವಾದದ ಸ್ವರೂಪ ಪಡೆದಿದ್ದು, ಹಿರಿಯ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಶಾಸಕ ಹಾಗೂ ಸಚಿವರು ಅಶೋಕ್‌ ವಿರುದ್ಧ ತೀವ್ರ ವಾಗ್ದಾಳಿಗೆ ಇಳಿದಿದ್ದಾರೆ.

ಬೆಂಗಳೂರು ಉಸ್ತುವಾರಿ ಜಟಾಪಟಿ ಸಿಎಂ ಬೊಮ್ಮಾಯಿ ಬ್ರೇಕ್!

'ಬಿಡಿಎ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಇದು ಹೀಗೆ ಮುಂದುವರೆದರೆ ಹಿರಿಯರಿಗೆ ದೂರು ನೀಡುವುದಾಗಿ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಅಶೋಕ್‌ ವಿರುದ್ಧ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌, ‘ಬೆಂಗಳೂರು ನಗರಕ್ಕೆ ಯಾರೂ ಉಸ್ತುವಾರಿಗಳಿಲ್ಲ. ಅಮೃತ್‌ ಹಾಗೂ ಕೊರೋನಾ ನಿರ್ವಹಣೆಗಾಗಿ ಮಾತ್ರ ಅವರಿಗೆ (ಅಶೋಕ್‌) ಹೊಣೆ ನೀಡಲಾಗಿತ್ತು. ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.