Nov 19, 2021, 12:17 PM IST
ಬೆಂಗಳೂರು (ನ. 19): ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, 3 ವಿವಾದಿತ ಕೃಷಿಕಾಯ್ದೆಯನ್ನು ವಾಪಸ್ (Farm Laws) ಪಡೆದಿದೆ. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಮಸೂದೆ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ರೈತ ಹೋರಾಟಗಾರರನ್ನು ಮನೆಗೆ ತೆರಳುವಂತೆ ಪ್ರಧಾನಿ ಮೋದಿ (PM Modi) ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರ ಅಚ್ಚರಿ ಮೂಡಿಸಿದೆ.
Modi Withdraws Farm Bills ವಿವಾದಿತ ಕೃಷಿ ಕಾಯ್ದೆ ಪ್ರಧಾನಿ ಮೋದಿ ಹಿಂಪಡೆಯಲು ಕಾರಣವೇನು.?
'ಉತ್ತರ ಪ್ರದೇಶ ಚುನಾವಣೆ, ಪಂಜಾಬ್ ಚುನಾವಣಾ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಕಾಣಿಸುತ್ತದೆ. ಚುನಾವಣಾ ಸಂದರ್ಭದಲ್ಲಿ ಮೋದಿಯೂ ಕೂಡಾ ಮಣಿಯುತ್ತಾರೆ ಎಂಬ ಸಂದೇಶ ನೀಡಿದ್ದಾರೆ. ಈ ಮಸೂದೆ ವಾಪಸ್‌ನಿಂದ ರೈತರಿಗೆ ನಿಜಕ್ಕೂ ಅನುಕೂಲವಾಗಲಿದಾ ಎಂಬುದು ಚರ್ಚಾಸ್ಪದ ವಿಷಯ' ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಸಂಪಾದಕರಾದ ಅಜಿತ್ ಹನಮಕ್ಕನವರ್ ವಿಶ್ಲೇಷಿಸಿದ್ದಾರೆ.