Nov 25, 2023, 11:17 PM IST
ಬೆಂಗಳೂರು (ನ.25): ಕರ್ನಾಟಕದ ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್ ವೆಂಕಟೇಶ್ ಅವರಿಗೆ ಕರುನಾಡು ಭಾವಪೂರ್ಣವಾಗಿ ಬೀಳ್ಕೊಟ್ಟಿದೆ. ಹುತಾತ್ಮ ಯೋಧನಿಗೆ ಜನರು, ನಾಯಕರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಪ್ರಾಂಜಲ್ ಅಮರ ರಹೇ ಎಂದು ಎಲ್ಲೆಲ್ಲೂ ಜಯಘೋಷ ಮೊಳಗಿತು. 23 ಕಿಮೀ ಅಂತಿಮಯಾತ್ರೆಯ ತುಂಬಾ ಜನಸಾಗರವೇ ನೆರೆದಿತ್ತು. ಒಬ್ಬನೇ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಕಣ್ಣೀರಿಟ್ಟಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ ಪ್ರಾಂಜಲ್ ಅಂತ್ಯಕ್ರಿಯೆ ನಡೆದಿದೆ.
ಶುಕ್ರವಾರ ರಾತ್ರಿ 10 ಗಂಟೆ ವೇಳೆ ಎಚ್‌ಎಎಲ್‌ಗೆ ಪ್ರಾರ್ಥಿವ ಶರೀರ ಬಂದಿತ್ತು. ಎಚ್‌ಎಎಲ್‌ನಲ್ಲಿ ಪ್ರಾಂಜಲ್‌ಗೆ ಕುಟುಂಬಸ್ಥರು ನಮನ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ, ಜಾರ್ಜ್, ರಾಜ್ಯಪಾಲರು ಗೌರವ ಸಲ್ಲಿಸಿದ್ದಾರೆ.
ಯೋಧ ಪ್ರಾಂಜಲ್ ಕಳೇಬರ ಇಂದು ಬೆಂಗಳೂರಿಗೆ; ಮಗನ ತ್ಯಾಗದ ಬಗ್ಗೆ ಹೆಮ್ಮೆ ಇದೆ ಎಂದ ತಂದೆ!
ಪ್ರಾಂಜಲ್ ಕುಟುಂಬಕ್ಕೆ ಸಿಎಂ ಸಿದ್ಧರಾಮಯ್ಯ 50 ಲಕ್ಷ ಪರಿಹಾರ ಘೋಷಿಸಿದರು. ಬಿವೈ ವಿಜಯೇಂದ್ರ ,ತೇಜಸ್ವಿ ಸೂರ್ಯರಿಂದಲೂ ನಮನ. ಆ ಬಳಿಕ ಸೇನಾಧಿಕಾರಿಗಳಿಂದ ಕುಟುಂಬಸ್ಥರಿಗೆ ಪ್ರಾರ್ಥಿವ ಹಸ್ತಾಂತರ. ಆ ಬಳಿಕ ಜಿಗಣಿ ನಂದನವನ ಬಡಾವಣೆ ಮನೆಗೆ ಪಾರ್ಥಿವ ಶಿಫ್ಟ್ ಮಾಡಲಾಗಿತ್ತು.