ಜಿಟಿಜಿಟಿ ಮಳೆ, ಗಢಗಢ ಚಳಿ, ಜನ ಜೀವನ ಅಸ್ತವ್ಯಸ್ತ, ಬಿಸಿಲಿಗಾಗಿ ಎದುರು ನೋಡುತ್ತಿದ್ದಾರೆ ಜನ!

Nov 13, 2021, 5:39 PM IST

ಬೆಂಗಳೂರು (ನ. 13): ಕಳೆದ ಎರಡು ದಿನಗಳಿಂದ ಬಿಟ್ಟು ಸುರಿಯುತ್ತಿರುವ ಜಡಿ ಮಳೆಗೆ ಕರುನಾಡು ತತ್ತರಿಸಿದೆ. ಒಂದೆಡೆ ಜಿಟಿಜಿಟಿ ಮಳೆ, ಇನ್ನೊಂದೆಡೆ ಮೈ ನಡುಗಿಸುವ ಚಳಿ. ಸಾಕಪ್ಪಾ ಸಾಕು ಎನಿಸುವ ವಾತಾವರಣ ನಿರ್ಮಾಣವಾಗಿದೆ. ಇಂತಹ ವಾತಾವರಣದಲ್ಲಿ ಮನೆಯಿಂದ ಹೊರ ಬರಲು ಆಗುತ್ತಿಲ್ಲ.  ಬೀದಿ ಬದಿ ವ್ಯಾಪಾರಿಗಳು, ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಬೆಳೆಗಳು ಹಾಳಾಗುತ್ತಿದೆ. ರೈತಾಪಿ ಕೆಲಸಗಳಿಗೆ ಅಡ್ಡಿಯಾಗುತ್ತಿದೆ ಎಂದು ರೈತರು ಕಂಗಾಲಾಗಿದ್ದಾರೆ. 

ಜಿಟಿಜಿಟಿ ಮಳೆ, ಮೈ ನಡುಗಿಸುವ ಚಳಿ, ಬೆಚ್ಚನೆ ಮಲಗಿದೆ ಸಿಲಿಕಾನ್ ಸಿಟಿ!