PSI Scam: ಭ್ರಷ್ಟಾಚಾರಕ್ಕೆ ವಿಶ್ವಮಾನವ ಎಂದ ಡಿಕೆಶಿ, ಅಶ್ವತ್ಥನಾರಾಯಣ ಪರ ಸಿಎಂ, ಸಚಿವರ ಬ್ಯಾಟಿಂಗ್‌

May 6, 2022, 4:30 PM IST

ಮಹತ್ವದ ಬೆಳವಣಿಗೆಯೊಂದರಲ್ಲಿ ಪಿಎಸ್‌ಐ ಪರೀಕ್ಷೆ (PSI Recruitment Scam) ಅಕ್ರಮ ಪ್ರಕ​ರ​ಣ​ದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್‌ ಇಲಾ​ಖೆಯ ಇಬ್ಬರು ಉನ್ನತ ಅಧಿ​ಕಾ​ರಿ​ಗ​ಳನ್ನು ಬಂಧಿ​ಸ​ಲಾ​ಗಿ​ದೆ. ಬ್ಲ್ಯಾಕ್‌ ಮೇಲ್‌ ಮಾಡಿದ ಆರೋ​ಪದ ಮೇರೆಗೆ ಡಿವೈ​ಎಸ್ಪಿ ಹಾಗೂ ಅಭ್ಯ​ರ್ಥಿ​ಗ​ಳನ್ನು ಪೂರೈ​ಸಿದ ಆರೋ​ಪದ ಮೇರೆಗೆ ಸಿಪಿಐ ಒಬ್ಬ​ರನ್ನು ಸಿಐಡಿ ಬಂಧಿ​ಸಿದೆ.

ಮೋದಿಯಿಂದ ಡೆನ್ಮಾರ್ಕ್ ಯುವರಾಣಿ ಮೇರಿಗೆ ಗಾಜಿನ ಹಕ್ಕಿ, ಯುವರಾಜನಿಗೆ ಡೋಕ್ರಾ ದೋಣಿ, ಏನಿದರ ಮಿಸ್ಟರಿ?

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು ಡಿವೈಎಸ್ಪಿ ವಿಜಯ ಕುಮಾರ್‌ ಸಾಲಿ ಹಾಗೂ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ ಬಂಧಿತ ಪೊಲೀಸ್‌ ಅಧಿ​ಕಾ​ರಿ​ಗ​ಳು. ಇಬ್ಬ​ರನ್ನೂ ತಡರಾತ್ರಿವರೆಗೂ ತೀವ್ರ ವಿಚಾರಣೆ ನಡೆಸಿದ್ದ ಸಿಐಡಿ ಬಂಧಿ​ಸಿ​ದೆ. ಈ ಇಬ್ಬ​ರನ್ನೂ 8 ದಿನ​ಗಳ ಕಾಲ ಸಿಐಡಿ ಕಸ್ಟ​ಡಿಗೆ ಒಪ್ಪಿ​ಸ​ಲಾ​ಗಿ​ದೆ. ಇನ್ನು ಈ ವಿಚಾರವಾಗಿ ಬಿಜೆಪಿ- ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ನಡೆದಿದೆ. 

ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ಅಭ್ಯರ್ಥಿಗಳ ರಕ್ಷಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಭ್ರಷ್ಟಾಚಾರಕ್ಕೇ ವಿಶ್ವಮಾನವ. ಉನ್ನತ ಶಿಕ್ಷಣ ಇಲಾಖೆಯಲ್ಲಿನ ಅಕ್ರಮಗಳಿಗೂ ಇವರೇ ಪಿತಾಮಹ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪ ಮಾಡಿದ್ದಾರೆ.