Apr 29, 2022, 10:55 AM IST
ಬೆಂಗಳೂರು (ಏ. 29): ಪಿಎಸ್‌ಐ ನೇಮಕಾತಿ ಹಗರಣದ (PSI Recruitment Scam) ಕಿಂಗ್‌ಪಿನ್ ದಿವ್ಯಾ ಹಾಗರಗಿ (Divya Hagaragi) ಬಂಧನವಾಗಿದೆ. ಕಳೆದ 18 ದಿನಗಳಿಂದ ದಿವ್ಯಾ ಹಾಗರಗಿಗಾಗಿ ಸಿಐಡಿ (CID) ಹುಡುಕಾಟ ನಡೆಸಿತ್ತು. ಪರೀಕ್ಷಾ ಅಕ್ರಮಕ್ಕೆ ಜ್ಯೋತಿ ಎಂಬಾಕೆ ಸಹಾಯ ಮಾಡಿದ್ದರು. ಈ ಜ್ಯೋತಿ ಪಾಟೀಲ್ ಫೋನ್ ಮೂಲಕ ದಿವ್ಯಾ ಹಾಗರಗಿಗೆ ಕರೆ ಮಾಡಲಾಗುತ್ತದೆ. ಆ ಮೂಲಕ ದಿವ್ಯಾ ಎಲ್ಲಿದ್ದಾರೆ ಎಂದು ಪತ್ತೆ ಮಾಡಲಾಗುತ್ತದೆ. ಹೊಟೇಲ್‌ನಲ್ಲಿ ಊಟ ಮಾಡ್ತಾ ಕುಳಿತಿದ್ದಾಗ ದಿವ್ಯಾ ಹಾಗರಗಿ ಬಂಧನವಾಗುತ್ತದೆ.