PSI ನೇಮಕಾತಿ ಹಗರಣದಲ್ಲಿ ಬಿಜೆಪಿ-ಕಾಂಗ್ರೆಸ್‌ನದ್ದು ಸಮಾನ ಷಡ್ಯಂತ್ರ ಎಂಬುದು ಕಂಡು ಬರುತ್ತಿದೆ. ಈ ಹಗರಣದ ಕಿಂಗ್‌ಪಿನ್‌ಗಳಲ್ಲಿ ಕಾಂಗ್ರೆಸ್ ನಾಯಕ ಆರ್ ಟಿ ಪಾಟೀಲ್ ಹೆಸರೂ ಕೂಡಾ ಕೇಳಿ ಬರುತ್ತಿದೆ. ಅಫ್‌ಜಲ್‌ಪುರದ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಸಹೋದರ ಈತ.
ಬೆಂಗಳೂರು (ಏ. 23): PSI ನೇಮಕಾತಿ ಹಗರಣದಲ್ಲಿ ಬಿಜೆಪಿ-ಕಾಂಗ್ರೆಸ್‌ನದ್ದು ಸಮಾನ ಷಡ್ಯಂತ್ರ ಎಂಬುದು ಕಂಡು ಬರುತ್ತಿದೆ. ಈ ಹಗರಣದ ಕಿಂಗ್‌ಪಿನ್‌ಗಳಲ್ಲಿ ಕಾಂಗ್ರೆಸ್ ನಾಯಕ ಆರ್ ಟಿ ಪಾಟೀಲ್ ಹೆಸರೂ ಕೂಡಾ ಕೇಳಿ ಬರುತ್ತಿದೆ. ಅಫ್‌ಜಲ್‌ಪುರದ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಸಹೋದರ ಈತ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರಲಿ, ಆರ್‌ಡಿ ಪಾಟೀಲ್ ಬಳಿ ಹೋದರೆ ಕೆಲಸ ಆಗುತ್ತದೆ ಎನ್ನುವಷ್ಟರ ಮಟ್ಟಿಗೆ ಪ್ರಭಾವಿಯಾಗಿದ್ದರು. ಇದೀಗ ಇವರು ತಲೆ ಮರೆಸಿಕೊಂಡಿದ್ದು, ಶೋಧ ಮುಂದುವರೆದಿದೆ.
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದಡಿ ಇದೀಗ ಅಫಜಲ್ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಖರ್ಗೆ ಕುಟುಂಬದ ಆಪ್ತ ಮಹಾಂತೇಶ್ ಪಾಟೀಲ್‌ರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.