ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ; ಪೊಲೀಸರೊಂದಿಗೆ ತಳ್ಳಾಟ, ನೂಕಾಟ

ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ; ಪೊಲೀಸರೊಂದಿಗೆ ತಳ್ಳಾಟ, ನೂಕಾಟ

Published : Dec 27, 2022, 06:58 PM IST

ಅಖಿಲ ಭಾರತ ವಕೀಲರ ಒಕ್ಕೂಟ ವತಿಯಿಂದ ಸಾವಿರಾರು ವಕೀಲರು 'ವಕೀಲರ ರಕ್ಷಣಾ ಕಾಯ್ದೆ' ಜಾರಿಗೆ ಆಗ್ರಹಿಸಿ ಸುವರ್ಣಸೌಧ ಮುತ್ತಿಗೆ ಹಾಕಲು ಹೊರಟಿದ್ದರು. ಈ ವೇಳೆ ಪೊಲೀಸರು ಅಡ್ಡ ಇಟ್ಟಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು, ಪೊಲೀಸರನ್ನೇ ತಳ್ಳಾಡಿದ ಘಟನೆ ನಡೆದಿದೆ.

ಬೆಳಗಾವಿ (ಡಿ.27):  ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಅಖಿಲ ಭಾರತ ವಕೀಲರ ಒಕ್ಕೂಟ ವತಿಯಿಂದ ಸಾವಿರಾರು ವಕೀಲರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಸುವರ್ಣಸೌಧ ಮುತ್ತಿಗೆ ಹಾಕಲು ಹೊರಟಿದ್ದರು. ಈ ವೇಳೆ ಪೊಲೀಸರು ಅಡ್ಡ ಇಟ್ಟಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು, ಪೊಲೀಸರನ್ನೇ ತಳ್ಳಾಡಿದ ಘಟನೆ ನಡೆದಿದೆ.

ಪ್ರತಿವರ್ಷ ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಆದರೂ ವಕೀಲರ ರಕ್ಷಣೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಕೂಡಲೇ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ 144 ಸೆಕ್ಷನ್‌ ಜಾರಿಯಾಗಿದ್ದ ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಮನವಿ ಸ್ವೀಕರಿಸಲು ಬಂದ ಸಚಿವ ಗೋವಿಂದ ಕಾರಜೋಳರನ್ನು ತರಾಟೆಗೆ ತೆಗೆದುಕೊಂಡರು. ಯುವ ವಕೀಲರ ಜೊತೆಗೆ ಮಾತಿನ ಚಕಮಕಿನಡೆಯಿತು. ನಂತರ ಕಾನೂನು ಸಚಿವ ಮಾಧುಸ್ವಾಮಿಯೇ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಮಾಧುಸ್ವಾಮಿ ಬರದಿದ್ದಾಗ ಅವರ ವಿರುದ್ಧ ಘೋಷಣೆ ಕೂಗಿ ಒಳಗೆ ನುಗ್ಗಲು ಯತ್ನಿಸಿದರು. ಆಗ ಪೊಲೀಸರು ಕೇವಲ 10 ಜನ ಪದಾಧಿಕಾರಿಗಳು ಒಳಗೆ ಹೋಗಲು ಅವಕಾಶ ಮಾಡಿಕೊಡುವುದಾಗಿ ಹೇಳಿದರೂ ಕೇಳಲಿಲ್ಲ. ನಂತರ, ಬ್ಯಾರಿಕೇಡ್‌ ದಾಟಿ ಒಳನುಗ್ಗಲು ಯತ್ನಿಸಿದಾಗ ಅವರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. 
 

27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
Read more