ಬಿಟ್ ಕಾಯಿನ್ ಹಗರಣದ ಮೇಲೆ ಪಿಎಂಓ ಕಚೇರಿ ನಿಗಾ

Nov 10, 2021, 11:23 AM IST

ಬೆಂಗಳೂರು (ನ. 10): ರಾಜ್ಯಾದ್ಯಂತ ಬಿಟ್ ಕಾಯಿನ್ ಹಗರಣ (BitCoin) ಭಾರೀ ಸದ್ದು ಮಾಡುತ್ತಿದೆ. ಬಿಟ್ ಕಾಯಿನ್ ಹಗರಣದ ಮೇಲೆ ಪಿಎಂಓ ಕಚೇರಿ ನಿಗಾ ವಹಿಸಿದೆ. 

ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ 6 ಎಂಎಲ್‌ಸಿಗಳು ಹಿಂದೇಟು

ಕುಖ್ಯಾತ ಹ್ಯಾಕರ್ ಶ್ರೀಕಿ ಬಳಸಿಕೊಂಡು ಮಹಾ ಹಗರಣ ನಡೆದಿದೆ. ಈ ಹಗರಣದ ಹಿಂದೆ ಪ್ರಭಾವಿಗಳಿದ್ಧಾರೆ ಎನ್ನಲಾಗುತ್ತಿದೆ. ಈ ಬಾರಿಯ ಅಧಿವೇಶನದಲ್ಲಿ ಬಿಟ್‌ ಕಾಯಿನ್‌ ಬಗ್ಗೆ ಚರ್ಚೆ ನಡೆಸಲು ಬೇಕಾಗಿರುವ ಸಾಕ್ಷಿಗಳ ಸಂಗ್ರಹದಲ್ಲಿ ತೊಡಗಿರುವುದಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.  ಬಿಟ್‌ ಕಾಯಿನ್‌ ಅವ್ಯವಹಾರದಲ್ಲಿ ಕಾಂಗ್ರೆಸ್‌ನವರಿದ್ದರೆ ನೇಣು ಹಾಕಲಿ. ನಮ್ಮ ಅಭ್ಯಂತರವಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.