ಕಾಂಗ್ರೆಸ್‌ಗಿಂತ 5 ಪಟ್ಟು ಅಧಿಕ ಅನುದಾನ ಕೊಟ್ಟ ಪ್ರಧಾನಿ ಮೋದಿ: ರಾಜ್ಯಕ್ಕೆ 7,351 ಕೋಟಿ ರೂ. ಕೊಡುಗೆ

Mar 25, 2023, 5:15 PM IST

ದಾವಣೆಗೆರೆ (ಮಾ.25):  ಪ್ರಧಾನಿ ಮೋದಿ ಡಬಲ್ ಎಂಜಿನ್ ಸರ್ಕಾರಕ್ಕೆ 5 ಪಟ್ಟು ಹಣವನ್ನು ಕೇಂದ್ರ ನೀಡಿದೆ. ರಾಷ್ಟ್ರೀಯ ಹೆದ್ದಾರಿಗೆ 6,000 ಕಿಲೋಮೀಟರ್ ರಸ್ತೆಗೆ ಹಣ ಮಂಜೂರು ಮಾಡಲಾಗಿದೆ. ಈ ವರ್ಷ 7,351 ಕೋಟಿ ರೂಪಾಯಿಯನ್ನು ಕರ್ನಾಟಕಕ್ಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ದಾಹ. 60 ವರ್ಷ ಅಧಿಕಾರದಲ್ಲಿದ್ದರೂ ದೇಶದ ಬಗ್ಗೆ ಕಾಳಜಿ ಇಲ್ಲ, ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಆದರೆ, ಭದ್ರಾ ಮೇಲ್ಡಂಡೆ ಯೋಜನೆಗೆ 5,000 ಕೋಟಿ ರೂಪಾಯಿ ನೀಡಲಾಗಿದೆ ಎಂದು ಮುಖ್ಯಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇಂದು ದಾವಣೆಗೆರೆಯಲ್ಲಿ ಆಯೋಜಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭ ಪಾಲ್ಗೊಂಡು ಬೊಮ್ಮಾಯಿ ಮಾತನಾಡಿದ್ದಾರೆ. 

ಎಲ್ಲಾ ದೇಶಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತಕ್ಕೆ ಗೌರವ ನೀಡುತ್ತಿದೆ. ಪಾಕಿಸ್ತಾನದಲ್ಲಿ ಅಲ್ಲಿಯ ಸಾಮಾನ್ಯ ಜನ, ನಮಗೆ ನರೇಂದ್ರ ಮೋದಿಯಂತ ನಾಯಕತ್ವ ಬೇಕು ಎಂದು ಹೇಳುತ್ತಿದೆ. ಕೋವಿಡ್ ಸಂಪೂರ್ಣವಾಗಿ ನಿಯಂತ್ರಣ ಮಾಡಿ ಭಾರತವನ್ನು ಮುನ್ನಡೆಬಲ್ಲ ಮೋದಿ ನಾಯಕತ್ವ ಚೀನಾಗೆ ಬೇಕು ಎಂದು ಚೀನಾದ ಪತ್ರಿಕೆ ಹೇಳುತ್ತಿದೆ.  ಆದರೆ ನಮ್ಮರು, ವಿರೋಧ ಪಕ್ಷದ ನಾಯಕರು ಪ್ರಧಾನಿ ಮೋದಿ ಟೀಕೆ ಮಾಡಿ, ಭಾರತದ ಪ್ರಜಾಪ್ರಭುತ್ವವನ್ನು ವಿರೋಧಿ ಇತರ ದೇಶಗಳ ನೆರವು ಪಡೆಯುತ್ತಿದ್ದಾರೆ. ಇಂತಹ ನಾಯಕತ್ವ ನಮಗೆ ಬೇಕಾ ಅನ್ನೋದನ್ನು ನಾವು ಯೋಚಿಸಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.