ಮಂಗಳೂರು ಬ್ಲಾಸ್ಟ್‌ ಆರೋಪಿ ಶಾರಿಕ್‌ಗೆ ಪಿಎಫ್ಐ ಸಂಪರ್ಕ..?

Nov 23, 2022, 11:14 PM IST

ಬೆಂಗಳೂರು (ನ.23): ಮಂಗಳೂರು ಬ್ಲಾಸ್ಟರ್‌ ಪ್ರಕರಣದಲ್ಲಿ ಉಗ್ರ ಮೊಹಮದ್‌ ಶಾರಿಕ್‌ಗೆ ನಿಷೇಧಿತ ಪಿಎಫ್‌ಐ ಸಂಘಟನೆಯ ಸಂಪರ್ಕವಿತ್ತು ಅನ್ನೋದು ಬಹುತೇಕ ಖಚಿತವಾಗಿದೆ. ಇದರ ನಡುವೆ ಈ ಘಟನೆಯಲ್ಲಿ ಬಗೆದಷ್ಟು ಉಗ್ರ ಜಾಲ ಪತ್ತೆಯಾಗುತ್ತಿದೆ.

ಮಂಗಳೂರು ಆಸ್ಪತ್ರೆಯಲ್ಲಿ ಶಾರಿಕ್‌ಗೆ ಚಿಕಿತ್ಸೆ ನಡೆಯುತ್ತಿದೆ. ಶೇಕಡಾ 45 ರಷ್ಟು ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 1 ಕಣ್ಣು ತೆರೆಯಲು ಕೂಡ ಸಾಧ್ಯವಾಗುತ್ತಿಲ್ಲ. ಕೈಗಳು ಸುಟ್ಟಿರೊದ್ರಿಂದ ಬರವಣಿಗೆ ಅಸಾಧ್ಯವಾಗಿದೆ.ಶ್ವಾಸಕೋಶದಲ್ಲಿ ಹೊಗೆ ತುಂಬಿಕೊಂಡಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಭಯೋತ್ಪಾದಕ ಶಾರಿಕ್ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಕುತ್ತಿಗೆಯ ಗಾಯಗಳಿಗೆ ತಜ್ಞ ವೈದ್ಯರ ತಂಡ ವಿಶೇಷ ಚಿಕಿತ್ಸೆ ನೀಡುತ್ತಿದೆ.

ಫಡ್ನವೀಸ್‌ ಕನಸು ನನಸಾಗುವುದಿಲ್ಲ : ಸಿಎಂ ಬೊಮ್ಮಾಯಿ ತಿರುಗೇಟು

ಈ ನಡುವೆ  ನಿಷೇಧಿತ ಪಿಎಫ್ಐ ಸಂಘಟನೆ ನಾಯಕರ ಜೊತೆ ಶಾರಿಕ್ ಸಂಪರ್ಕ ಹೊಂದಿದ್ದ ಎನ್ನುವುದು ಬಯಲಾಗಿದೆ. ತಮಿಳುನಾಡಿನ ಮಾಜಿ ಪಿಎಫ್ಐ ನಾಯಕರು ಶಾರಿಕ್‌ಗೆ ಬೆಂಬಲ ನೀಡಿದ್ದಾರೆ. ಕೊಯಮತ್ತೂರು ಬಾಂಬ್ ಬ್ಲಾಸ್ಟ್‌ನಲ್ಲಿ  ಪಿಎಫ್ಐ ನಾಯಕರ ಕೈವಾಡ ಸಾಬೀತಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ತಮಿಳುನಾಡಿನಲ್ಲಿ ಉಗ್ರ ಶಾರಿಕ್ ಸಂಚಾರ ಮಾಡಿದ್ದ ಎನ್ನುವುದು ಬಹಿರಂಗವಾಗಿದೆ.