ಕೊರೋನಾ ಕುರಿತಾಗಿ ಬೆಂಗಳೂರು ಮಂದಿಗೆ ಗುಡ್‌ ನ್ಯೂಸ್..!

Apr 29, 2020, 6:31 PM IST

ಬೆಂಗಳೂರು(ಏ.29): ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವವರಿಗೊಂದು ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ನಗರದಲ್ಲಿ ಕೇವಲ 26 ಕಂಟೈನ್‌ಮೆಂಟ್ ಝೋನ್‌ಗಳಷ್ಟೇ ಇರುವುದು ಎಂದು ಬಿಬಿಎಂಪಿ ಖಚಿತಪಡಿಸಿದೆ.

ಕೆಲವರು ಬೆಂಗಳೂರಿನಲ್ಲಿ 42 ಕಂಟೈನ್‌ಮೆಂಟ್ ಝೋನ್‌ಗಳಿರುವುದಾಗಿ ಸುಳ್ಳು ಸುದ್ದಿ ಹರಡಿಸುತ್ತಿದ್ದರು. ಈ ಗೊಂದಲಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರೆ ಎಳೆದಿದೆ. ಎಕ್ಸ್‌ಕ್ಲೂಸಿವ್ ದಾಖಲೆಗಳನ್ನು ಸುವರ್ಣ ನ್ಯೂಸ್ ಮುಂದಿಟ್ಟಿದೆ.

ಬೆಂಗಳೂರು ನಡುಗಿಸಿದ ಬಿಹಾರಿಗೆ ಕೊರೋನಾ ವೈರಸ್ ಬಂದಿದ್ಹೇಗೆ..?

ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿವೆ. 42 ವಾರ್ಡ್‌ಗಳಲ್ಲಿದ್ದ ಕೊರೋನಾ ಸೋಂಕು ಪ್ರಕರಣಗಳು ಇದೀಗ 26ಕ್ಕೆ ಇಳಿದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.