May 28, 2020, 11:41 AM IST
ಬೆಂಗಳೂರು (ಮೇ. 28): ಯಲಹಂಕ ಮೇಲ್ಸೇತುವೆ ಉದ್ಘಾಟನೆಯನ್ನು ಬಿಬಿಎಂಪಿ ಮುಂದೂಡಿದೆ. ಇಂದು ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರಿಟ್ಟು ಉದ್ಘಾಟನೆ ಕಾರ್ಯಕ್ರಮವನ್ನ ನಿಗದಿಪಡಿಸಲಾಗಿತ್ತು.
ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸ್ರು: ಏಕಾಏಕಿ ನಾಮಕಾರಣ ಕ್ಯಾನ್ಸಲ್
ಇಂದು ಪ್ಲೈ ಓವರ್ ಉದ್ಘಾಟನಾ ಸಮಾರಂಭ ರದ್ದಾಗಿದೆ. ' ಉದ್ಘಾಟನೆ ಯಾವಾಗ ಅಂತ ಶೀಘ್ರದಲ್ಲೇ ಫಿಕ್ಸ್ ಆಗುತ್ತೆ. ಆ ಫ್ಲೈ ಓವರ್‌ಗೆ ವೀರ ಸಾವರ್ಕರ್ ಹೆಸರನ್ನೇ ಇಡುತ್ತೇವೆ. ಆ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರುವ ಮಾಹಿತಿ ಇದೆ. ಸಿಎಂಗೆ ಗುಪ್ತಚರ ಇಲಾಖೆ ಮಾಹಿತಿ ಇರುವುದರಿಂದ ಇಂದು ಉದ್ಘಾಟನೆಯನ್ನು ರದ್ದು ಮಾಡಲಾಗಿದೆ' ಎಂದು ಸುವರ್ಣ ನ್ಯೂಸ್‌ಗೆ S R ವಿಶ್ವನಾಥ್ ಹೇಳಿಕೆ ಕೊಟ್ಟಿದ್ದಾರೆ.