ಪಠ್ಯ ವಿವಾದ ಬೆನ್ನಲ್ಲೇ ಗೌರವ ಪದವಿ ವಿವಾದ ಸೃಷ್ಟಿಯಾಗಿದೆ. ಕನ್ನಡ ವಿವಿ ನೀಡುವ ಪ್ರತಿಷ್ಢಿತ ನಾಡೋಜ ಪ್ರಶಸ್ತಿ ವಿವಾದ ಸೃಷ್ಟಿ ಮಾಡಿದೆ.
ಬೆಂಗಳೂರು (ಜೂ. 06): ಪಠ್ಯ ವಿವಾದ ಬೆನ್ನಲ್ಲೇ ಗೌರವ ಪದವಿ ವಿವಾದ ಸೃಷ್ಟಿಯಾಗಿದೆ. ಕನ್ನಡ ವಿವಿ ನೀಡುವ ಪ್ರತಿಷ್ಢಿತ ನಾಡೋಜ ಪ್ರಶಸ್ತಿ (Nadoja Award) ವಿವಾದ ಸೃಷ್ಟಿ ಮಾಡಿದೆ. ಈ ಹಿಂದೆ ಮಹೇಶ್ ಜೋಶಿ (Mahesh Joshi) ಹಂಪಿ ವಿವಿಯಿಂದ (Hampi University) ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಉಪಾದಿಯನ್ನು ಹೆಸರಿನ ಮುಂದೆ ಬಳಸಬಹುದೇ ಎಂದು ಕನ್ನಡ ವಿವಿಗೆ ಪತ್ರ ಬರೆದಿದ್ದು, ಈ ಬಗ್ಗೆ ಆಡಳಿತ ಮಂಡಳಿ ಸಮಗ್ರವಾಗಿ ಚರ್ಚಿಸಿ, ಬಳಸದಂತೆ ಸೂಚಿಸಿದೆ. ವಿವಿ ಆದೇಶದ ಬೆನ್ನಲ್ಲೇ ನಾಡೋಜ ಪುರಸ್ಕೃತರು ಅಸಮಾಧಾನಗೊಂಡಿದ್ದು, ಪದವಿಯನ್ನು ವಾಪಸ್ ಮಾಡಲು ಮುಂದಾಗಿದ್ದಾರೆ.