ಮುಡಾ ಹಗರಣ ಆರೋಪಿ ಸಿದ್ದರಾಮಯ್ಯ ಬಗ್ಗೆ ಮೈಸೂರು ಜನತೆ ಹೇಳೋದೇನು?

Oct 7, 2024, 8:29 PM IST

ಮೈಸೂರು (ಅ.07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 14 ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಂಡಿರುವುದು ದೊಡ್ಡ ಹಗರಣಾಗಿ ಪರಿಣಮಿಸಿದೆ. ಆದರೆ, ಈ ಹಗರಣದ ಆರೋಪ ತಮ್ಮ ಸಿಎಂ ಕುರ್ಚಿಗೆ ಕಂಟಕವಾದ ಬೆನ್ನಲ್ಲಿಯೇ ಪಾರ್ವತಿ ಸಿದ್ದರಾಮಯ್ಯ ಅವರು ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ. ಆದರೆ, ಈ ಬಗ್ಗೆ ಮೈಸೂರಿನ ಜನತೆ ಏನು ಹೇಳ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ..

ಮೈಸೂರಿನ ವ್ಯಕ್ತಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಸೈಟು ಪಡೆದುಕೊಂಡಿದ್ದಾರೆ ಎಂಬ ಕಾರಣದಿಂದಲೇ ಮುಡಾ ಹಗರಣ ಹೊರಗೆ ಬಂದಿದೆ. ಅದನ್ನು ವಿಪಕ್ಷಗಳು ಎತ್ತಿಕಟ್ಟಿ ರಾಜ್ಯದ ಜನತೆಗೆ ಜಗಜ್ಜಾಹೀರು ಮಾಡಿದ್ದಾರೆ. ಆದರೆ, ಇದೀಗ ಈ ವಿವಾದದಿಂದ ಬೇಸತ್ತ ಸಿದ್ದರಾಮಯ್ಯ ಅವರ ಪತ್ನಿ ಎಲ್ಲ ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ನಮ್ಮ ಸಿದ್ದರಾಮಯ್ಯ ಅವರಂತಹ ಮುಖ್ಯಮಂತ್ರಿ ನಮ್ಮ ದೇಶದಲ್ಲಿ ಎಲ್ಲಿಯೂ ಇಲ್ಲ. ಬಡಜನರ ಅಭಿವೃದ್ಧಿಗೆ ಕಂಕಣಬದ್ಧರಾಗಿ ನಿಂತಿದ್ದಾರೆ. ಆದರೆ, ಈಗ ಒಂದು ಹಗರಣ ಬಂದಿದೆ ಎಂದು ರಾಜೀನಾಮೆ ಪಡೆಯಬೇಕು ಎಂಬುದು ಸಖ್ಯವಲ್ಲ. ಸಿಎಂ ಮುಡಾ ಹಗರಣದ ವಿರುದ್ಧ ಕಾನೂನು ತನಿಖೆ ನಡೆಯುತ್ತಿದ್ದು, ಏನಾಗುತ್ತದೆ ನೋಡೋಣ ಎಂದು ಮೈಸೂರು ಜನತೆ ಹೇಳಿದ್ದಾರೆ.