
ಲೋಕಾಯುಕ್ತದಲ್ಲಿ ಒಂದು ರೌಂಡ್ ವಿಚಾರಣೆ ಎದುರಿಸಿರೋ ಸಿದ್ದರಾಮಯ್ಯನವ್ರಿಗೆ ಸಿಬಿಐ ಕಂಟಕ ಶುರುವಾಗಲಿದ್ಯಾ..? ಲೋಕಾಯುಕ್ತ ತನಿಖೆ ಹಳ್ಳ ಹಿಡಿಯುತ್ತಿದೆಯಾ?
ಮುಖ್ಯಮಂತ್ರಿ ಸಿದ್ದರಾಮಯ್ಯ ಜೀವನದಲ್ಲಿ ಮೊಟ್ಟ ಮೊದಲ ಬಾರಿ ಲೋಕಾಯುಕ್ತ ಕಟಕಟೆ ಏರಿದ್ದಾರೆ. ಮುಡಾ ಹಗರಣ ಸಂಬಂಧ 120 ನಿಮಿಷಗಳ ಕಾಲ ಲೋಕಾಯುಕ್ತ ತನಿಖೆ ಎದುರಿಸಿದ್ದಾರೆ. ಸಿದ್ದರಾಮಯ್ಯಗೆ 20 ಪ್ರಶ್ನೆಗಳನ್ನು ಕೇಳಲಾಗಿದೆ. 2 ಗಂಟೆಗಳ ವಿಚಾರಣೆಯಲ್ಲಿ ಸಿದ್ದು ಕೊಟ್ಟ ಉತ್ತರ ಹೇಗಿತ್ತು..? ಆದರೆ ಈ ಲೋಕಾಯುಕ್ತ ವಿಚಾರಣೆ ನಾಟಕ ಎಂದು ಬಿಜೆಪಿ ಹಾಗೂ ಜೆಡಿಎಸ್ ಆಕ್ರೋಶ ಹೊರಹಾಕಿದೆ. ಸತ್ಯ-ಸುಳ್ಳಿನ ಸಂಘರ್ಷದಲ್ಲಿ ಏನದು ಮುಡಾ ಅಕ್ರಮದ ಅಸಲಿಯತ್ತು?