
ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಇಂದು ವಿಪರೀತ ಮಳೆಯಾಗಿದೆ. ರಾಜ್ಯದಲ್ಲಿ ಈಗಾಗಲೇ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಗೆನೇ ಮಹಾರಾಷ್ಟ್ರದ ಕೆಲವು ಕಡೆಗಳಲ್ಲಿ ವಿಪರೀತ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆಯಿಂದಾಗಿ ಯಾವ ರಾಜ್ಯಗಳಲ್ಲಿ ಏನೆಲ್ಲ ಅನಾಹುತಗಳು ಸಂಭವಿಸಿವೆ ಅನ್ನೋದರ ಜೊತೆಗೆ ಈ ದಿನದ ಕಂಪ್ಲೀಟ್ ಮಳೆ ರಿಪೋರ್ಟ್ ನೋಡೋದೇ ಈ ಕ್ಷಣದ ವಿಶೇಷ ಮುಂಗಾರು ಮಳೆ.. ಘೋರ ಲೀಲೆ..
ಇದೆಲ್ಲವೂ ದೇಶದ ಯಾವೆಲ್ಲ ರಾಜ್ಯಗಲ್ಲಿ ಮುಂಗಾರು ಮಳೆ ಎಫೆಕ್ಟ್ ಹೇಗಿದೆ ಅನ್ನೋದರ ಕುರಿತು ಒಂದಿಷ್ಟು ಮಾಹಿತಿ. ಇನ್ನು ಇದೇ ರೀತಿ ರಾಜ್ಯದಲ್ಲೂ ಮುಂಗಾರು ಮಳೆ ಎಫೆಕ್ಟ್ ಜೋರಾಗಿನೇ ಇದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲೂ ಮುಂಗಾರು ಮಳೆ ಎಫೆಕ್ಟ್ ತಟ್ಟಿದೆ. ರಾಜ್ಯಾದ್ಯಂತ ಮಳೆಯಾಗುತ್ತಿದೆ. ಯಾವೆಲ್ಲ ರಾಜ್ಯಗಳಲ್ಲಿ ಮಳೆಯ ಪ್ರಮಾಣ ಮತ್ತು ಪ್ರಭಾವ ಹೇಗಿತ್ತು ಅನ್ನೋದನ್ನು ಇಲ್ಲಿ ನೋಡೋಣ.
ಬೆಂಗಳೂರು, ಚಿಕ್ಕಮಗಳೂರು ಮತ್ತು ಹಾಸನ ಸೇರಿದಂತೆ ರಾಜ್ಯದ ಇನ್ನು ಕೆಲವು ಕಡೆಗಳಲ್ಲಿ ಮುಂಗಾರು ಎಫೆಕ್ಟ್ ಜೋರಾಗಿದೆ. ಭಾರಿ ಮಳೆಗೆ ಬೆಳಗಾವಿಯಲ್ಲಿ ಪುಟ್ಟ ಮಗು ಪ್ರಾಣ ಕಳೆದುಕೊಂಡಿದೆ. ಮಂಗಳೂರಿನಲ್ಲಿ ಜನ ಜೀವನ ತುಂಬಾನೇ ಅಸ್ತವ್ಯಸ್ತವಾಗಿದೆ. ಮಡಿಕೇರಿಯಲ್ಲೂ ಮುಂಗಾರು ಮಳೆ ವಿಪರೀತ ತೊಂದರೆ ಕೊಡಲಾರಂಭಿಸಿದೆ. ಒಟ್ಟಿನಲ್ಲಿ ಮುಂಗಾರು ಆರಂಭಕ್ಕೆ ಇನ್ನು ಒಂದು ವಾರ ಇರುವಾಗಲೇ ದೇಶದ ಅನೇಕ ರಾಜ್ಯಗಲ್ಲಿ ಬಹು ದೊಡ್ಡ ಎಚ್ಚರಿಕೆಯನ್ನೇ ಕೊಟ್ಟಿದೆ.