MLC Election: ಪರಿಷತ್ ಸೋಲು, ಮಹಾಂತೇಶ್ ಕವಟಗಿಮಠ ಕಾಂಗ್ರೆಸ್ ಜೊತೆ ಕೈಜೋಡಿಸಿದ್ರಾ.?

Dec 21, 2021, 10:30 AM IST

ಬೆಳಗಾವಿ (ಡಿ. 21): ಬೆಳಗಾವಿ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Elections) ಬಿಜೆಪಿ ಸೋಲಿನ ನಂತರ ಇದೆ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ್‌ (Nalin kumar Kateel) ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ.

Belagavi Riot: ಪುಂಡರ ಮೇಲೆ ಗೂಂಡಾಕಾಯ್ದೆ, ದೇಶದ್ರೋಹ ಕೇಸ್, ಮತಾಂತರ ನಿಷೇಧಕ್ಕೆ ಅಸ್ತು

ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷ ಸೋಲು ಇರುವ ಕಾರಣಗಳೇನು ಎಂಬುವುದರ ಕುರಿತು ಅವಲೋಕನ ನಡೆಸಲಾಗಿದೆ ಎಂದು ಹೇಳಲಾಗಿದೆ. ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಮಾಡಿದ್ದರಿಂದ ಮಹಾಂತೇಶ ಕವಟಗಿಮಠ (Mahantesh Kavatagimath) ಸೋಲುಂಡಿರುವ ಕುರಿತು ಸಭೆಯಲ್ಲಿಯೇ ವಾಗ್ವಾದ ಕೂಡ ನಡೆದಿದೆ. ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಕುರಿತಾಗಿಯೇ ಹೆಚ್ಚು ಚರ್ಚೆ ಅವಲೋಕನ ಸಭೆಯಲ್ಲಿ ನಡೆದಿದ್ದು, ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ್ ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. 

ಪಕ್ಷೇತರರ ಅಭ್ಯರ್ಥಿಯಿಂದ ಸೋಲಾಯಿತು ಎಂದು ನಾನು ಹೇಳೋಕೆ ಆಗಲ್ಲ. ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಕೇಳುವುದರಲ್ಲಿ ವಿಫಲವಾಗಿದ್ದೇವೆ ಎನ್ನುವುದು ಕಷ್ಟ. ಆದರೆ, ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣವಾಯಿತು. ಆಂತರಿಕವಾಗಿ ಸಾಕಷ್ಟುಚರ್ಚೆಯಾಗಿದೆ. ಈ ಬಗ್ಗೆ ಎಲ್ಲಿಯೂ ಹೇಳುವುದಕ್ಕೆ ಆಗುವುದಿಲ್ಲ ಎಂದು ಕಟೀಲ್ ಹೇಳಿದ್ದಾರೆ.