ವಿಧಾನ ಪರಿಷತ್ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ತಲಾ 11 ಸ್ಥಾನಗಳನ್ನು ಗೆದ್ದು ಸಮಬಲದ ಪ್ರದರ್ಶನ ನೀಡಿದೆ.
ಬೆಂಗಳೂರು (ಡಿ. 15): ವಿಧಾನ ಪರಿಷತ್ 25 ಸ್ಥಾನಗಳಿಗೆ (MLC Elections) ನಡೆದ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ತಲಾ 11 ಸ್ಥಾನಗಳನ್ನು ಗೆದ್ದು ಸಮಬಲದ ಪ್ರದರ್ಶನ ನೀಡಿದೆ.
3 ಪರಿಷತ್ ಕ್ಷೇತ್ರದಲ್ಲಿ ನಮಗೆ ಹಿನ್ನಡೆಯಾಗಿದೆ. ಬೆಳಗಾವಿ (Belagavi) ಮೈಸೂರು (Mysuru) ಹಾಗೂ ತುಮಕೂರಿನಲ್ಲಿ (Tumakur) ನಾವು ಗೆಲ್ಲಬೇಕಿತ್ತು. ಆದರೆ ಸೋತಿದ್ದೇವೆ. ಈ ಬಗ್ಗೆ ಆತ್ಮಾವಲೋಕನ ಮಾಡಲಿದ್ದೇವೆ. ಬೆಳಗಾವಿ ಸೋಲಿಗೆ ಕಾರಣ ಏನು ಎಂದು ತನಿಖೆ ನಡೆಸಲಿದ್ದೇವೆ' ಎಂದು ಮಾಜಿ ಸಿಎಂ ಬಿಎಸ್‌ವೈ (BS Yediyurappa) ಹೇಳಿದ್ಧಾರೆ.