Aug 10, 2022, 5:18 PM IST
ಚರಂಡಿ ನೀರನ್ನು ಕ್ಷಣಾರ್ಧದಲ್ಲಿ ಸಂಸ್ಕರಿಸಿ ಶುದ್ಧ ಕುಡಿಯುವ ನೀರು ನೀಡುವ ‘ಗಾಲ್ ಮೊಬೈಲ್’ ನೀರು ಸಂಸ್ಕರಣೆ ಯಂತ್ರವನ್ನು ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಲೋಕಾರ್ಪಣೆಗೊಳಿಸಿದರು.
ಹರ್ ಘರ್ ತಿರಂಗಾ: 7 ತಿಂಗಳು ಮೊದಲೇ ಐಡಿಯಾ ಕೊಟ್ಟಿದ್ದು ಹುಬ್ಬಳ್ಳಿಯ ದೀಪಕ್..!
ನೆರೆ ಸಂಭವಿಸಿ ನೀರಿಗೆ ತೊಂದರೆ ಆದಾಗ ಯಂತ್ರ ಬಳಸಿ ಸ್ಥಳದಲ್ಲೇ ಶುದ್ಧ ನೀರು ಒದಗಿಸಬಹುದು. ಕುಡಿಯುವ ನೀರಿನ ಅಭಾವವಿರುವ ಬಡಾವಣೆ, ಶಾಲೆ-ಕಾಲೇಜುಗಳಲ್ಲಿ ಮತ್ತು ಹಳ್ಳಿಗಳಿಗೂ ಈ ಯಂತ್ರವನ್ನು ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಈ ಯಂತ್ರಕ್ಕೆ .1.25 ಕೋಟಿ ಬೆಲೆ ಇದ್ದು, ಕಂಪನಿಯೇ ಇದರ ನಿರ್ವಹಣೆ ಮಾಡುತ್ತದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿ, ಈ ಯಂತ್ರವನ್ನು ‘ಮೇಕ್ ಇನ್ ಕರ್ನಾಟಕ’ ಯೋಜನೆಯಡಿ ಉತ್ಪಾದಿಸಲು ಕೋರುತ್ತೇನೆ’ಎಂದರು.
ನಾಲ್ಕು ಶೋಧಕ ಕೊಳಾಯಿಗಳು ಮೊದಲಿಗೆ ತ್ಯಾಜ್ಯ ನೀರಿನ ಸಣ್ಣ ಕಣಗಳನ್ನು ಹೊರಹಾಕಿ, ನಂತರ ದೊಡ್ಡ ಕಣಗಳನ್ನು ಶೋಧಿಸುತ್ತದೆ. ಮೂರು ಮತ್ತು ನಾಲ್ಕನೇ ಶೋಧಕಗಳು ನೀರಿನ ದುರ್ಗಂಧವನ್ನು ತೆಗೆದು, ಅಂತಿಮವಾಗಿ ಕುಡಿಯಲು ಯೋಗ್ಯವಾದ ನೀರನ್ನಾಗಿಸುತ್ತದೆ.