Mar 1, 2022, 1:31 PM IST
ದಾವಣಗೆರೆ (ಮಾ. 01): ಮೇಕೆದಾಟು ಯೋಜನೆಗೆ ಆಗ್ರಹಿಸಿ, ಮೇಕೆದಾಟು-2 ಪಾದಯಾತ್ರೆ ಆರಂಭಿಸಿದೆ. ಈ ಪಾದಯಾತ್ರೆಗೆ ಬಿಜೆಪಿ ನಾಯಕರಿಂದ ಟೀಕೆ ವ್ಯಕ್ತವಾಗಿದೆ. 'ಕಾಂಗ್ರೆಸ್‌ಗೆ ಈಗ ಕೆಟ್ಟ ಕಾಲ ಶುರುವಾಗಿದೆ. ಈ ಹಿಂದೆ ಮೇಕೆದಾಟು ಆರಂಭ ಮಾಡಿ ಕೋವಿಡ್ ಹಿನ್ನೆಲೆ ಅರ್ಧಕ್ಕೆ ನಿಂತು ಹೊಯಿತು. ಈಗ ಉಕ್ರೇನ್ ನಲ್ಲಿ ನಮ್ಮ ಮಕ್ಕಳ ಸಂಕಷ್ಟದಲ್ಲಿ ಇದ್ದಾರೆ. ಕಾಂಗ್ರೆಸ್ ನವರು ಬಿರಿಯಾನಿ ತಿನ್ನುತ್ತಾ ಜೊತೆಗೆ ಡಾನ್ಸ್ ಮಾಡುತ್ತಾ ಪಾದಯಾತ್ರೆ ಮಾಡುತ್ತಿದ್ದಾರೆ' ಎಂದು ಹೊನ್ನಾಳಿಯಲ್ಲಿ ಕಂದಾಯ ಸಚಿವ ಆರ್ ಅಶೋಕ ವಾಗ್ದಾಳಿ ನಡೆಸಿದರು.
Mekedatu Padayatre:ಜನರ ಗಮನ ಸೆಳೆಯಲು ಕಾಂಗ್ರೆಸ್‌ನ ಗಿಮಿಕ್: ಬಿ.ಸಿ ಪಾಟೀಲ್
ಮೇಕೆದಾಟು ವಿಚಾರ ಕೋರ್ಟಿನಲ್ಲಿದೆ. ಸೂಕ್ಷ್ಮವಾಗಿ ಬಗೆಹರಿಸಬೇಕು. ಕಾಂಗ್ರೆಸ್ ಪಾದಯಾತ್ರೆಯಿಂದ ತಮಿಳುನಾಡು ಕೈಗೆ ಅಸ್ತ್ರ ಕೊಟ್ಟಂತಾಗುತ್ತದೆ. ಈ ಹಿಂದೆ ಎಸ್ ಎಂ ಕೃಷ್ಣ ಕಾವೇರಿ ವಿಚಾರದಲ್ಲಿ ಪಾದಯಾತ್ರೆ ಮಾಡಿ ಏನಾಗಿದೆ.? ಕೋರ್ಟ್ ಛೀಮಾರಿ ಹಾಕಿತ್ತು. ಇಷ್ಟಕ್ಕೂ ಇವರ ಮಾತು ಕೇಂದ್ರ ರಾಜ್ಯ ಸರ್ಕಾರಗಳು ಕೇಳುತ್ತಿಲ್ಲ. ಯಾವ ಪುರುಷಾರ್ಥ ಕ್ಕೆ ಈ ಯಾತ್ರೆ.? ಸಿದ್ದು ಪ್ರಭಾವಿನಾ ಡಿಕೆಶಿ ಪ್ರಭಾವಿನಾ ಎಂಬ ಸ್ಪರ್ಧೆ ಇಲ್ಲಿ ನಡೆಯಿತ್ತಿದೆ.
ಮೀಡಿಯಾ ಜೊತೆಗೆ ಪ್ರಚಾರದಲ್ಲಿ ಈಗ ಡಿಕೆಶಿ ಮಾತ್ರ ಕಾಣುತ್ತಿದ್ದಾರೆ ಎಂದ ಆರ್ ಅಶೋಕ್ ವಾಗ್ದಾಳಿ ನಡೆಸಿದರು.