Nov 22, 2022, 4:29 PM IST
ಮಂಗಳೂರು ಸ್ಫೋಟದ ರೂವಾರಿ ಅಬ್ದುಲ್ ಮತೀನ್ ಎಂಬುದನ್ನು ಡಿಜಿಪಿ ಅಲೋಕ್ ಕುಮಾರ್ ಹೇಳೀಕೆ ನೀಡಿದ್ದಾರೆ. ಕಳೆದ ಮೂರು ವರ್ಷದಿಂದ ನಾಪತ್ತೆಯಾಗಿರುವ ಶಂಕಿತ ಉಗ್ರ ಮತೀನ್ ಅವರ ತಂದೆ ಮುನ್ಸೂರ್ ಖಾನ್ 26 ವರ್ಷ ಭಾರತೀಯ ಸೇನೆಯಲ್ಲಿದ್ದರು. ಎಂಜಿನಿಯರಿಂಗ್ ಓದಲು ಬೆಂಗಳೂರಿಗೆ ಹೋದವನಿಗೆ ಉಗ್ರ ನಂಟು ಬೆಳೆದಿತ್ತು. ಪುಣೆಯ ಉಗ್ರ ಅಡ್ಮಿನ್ ಅಗಿರೋ ವಾಟ್ಸಪ್ ಗ್ರೂಪ್‌ನಲ್ಲಿ ಶಾರೀಕ್ ಮತ್ತು ಮಾಜ್ ಮುನೀರ್ ಸಕ್ರಿಯರಾಗಿದ್ದರು. ಶಾರೀಕ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯವನಾಗಿದ್ದು, ಮಾಜ್ ಮುನೀರ್ ಮತ್ತು ಮತಿನ್ ಕೂಡ ಈ ಪ್ರದೇಶವರಾಗಿದ್ದಾರೆ. ಎಲ್ಲರೂ ಸ್ನೇಹಿತರಾಗಿದ್ದರು. ಪುಣೆಯಲ್ಲಿರುವ ಉಗ್ರ ಸಂಘಟನೆ ಜೊತೆಗೆ ಮತಿನ್ ಸಂಪರ್ಕ ಇಟ್ಟುಕೊಂಡಿದ್ದು, ಈತ ಶಾರೀಕ್‌ನ ಬ್ರೈನ್ ವಾಶ್ ಮಾಡಿದ್ದ. 2019ರಲ್ಲಿ ತಮಿಳುನಾಡಿನ ಹಿಂದೂ ನಾಯಕನ ಹತ್ಯೆ ಕೇಸ್‌ನ ಆರೋಪಿಗಳ ಜೊತೆ ಇವರಿಗೆ ನಂಟು ಬೆಳೆದಿದ್ದು, 2019ರಲ್ಲಿ ಬೆಂಗಳೂರಿನಲ್ಲಿ ನಡೆದ ಐಸಿಸ್ ಸಭೆಗಳಲ್ಲೂ ಮತೀನ್ ಭಾಗಿಯಾಗಿದ್ದ. ಆಷ್ಘಾನ್, ಸಿರಿಯಾದಲ್ಲಿ ಐಸಿಸ್ ಸೇರಲು ಮುಸ್ಲಿಂ ಯುವಕರಿಗೆ ಪ್ರಚೋದನೆ ನೀಡುತ್ತಿದ್ದ ಎನ್ನಲಾಗಿದೆ. ತನ್ನ ಊರಿನ ಯುವಕರನ್ನು ಕೂಡ ಐಸಿಸ್‌ನತ್ತ ಸೆಳೆಯಲು ಯತ್ನಿಸುತ್ತಿದ್ದ. ಇದೇ ರೀತಿ ಶಾರೀಕ್‌ನ ತಲೆ ಕೆಡಿಸಿದ್ದ ಎನ್ನಲಾಗುತ್ತಿದೆ. 2019ರಿಂದ ನಾಪತ್ತೆಯಾಗಿರೋ ಮತೀನ್‌ಗಾಗಿ ಎನ್‌ಐಎ .3 ಲಕ್ಷ ಬಹುಮಾನ ಘೋಷಿಸಿದೆ ಎಂಬುದು ಗಮನಿಸಬೇಕು.