ಮಂಡ್ಯ, ರಾಮನಗರದಲ್ಲಿಯೂ ಭೂಕಂಪದ ಅನುಭವವಾಗಿದೆ. ಮನೆ, ಕಚೇರಿ, ಕಟ್ಟಡಗಳ ಕಿಟಕಿ, ಗಾಜುಗಳು ನಲುಗಿದೆ.
ಬೆಂಗಳೂರು (ನ. 26): ನಗರದ ಹಲವೆಡೆ ಭೂ ಕಂಪನದ (Earthquake) ಅನುಭವವಾಗಿದೆ. ಕಗ್ಗಲಿಪುರ, ಆರ್‌ಆರ್ ನಗರ, ಕೆಂಗೇರಿ, ಹೆಮ್ಮಿಗೆಪುರ ಸೇರಿ ಹಲವೆಡೆ ಭೂಕಂಪನದ ಅನುಭವವಾಗಿದೆ. ಮಧ್ಯಾಹ್ನ 12.15 ಕ್ಕೆ ಭೂಮಿ ನಡುಗಿದ ಅನುಭವವಾಗಿದೆ. ಇದರ ಬೆನ್ನಲ್ಲೇ ಮಂಡ್ಯ, ರಾಮನಗರದಲ್ಲಿಯೂ ಭೂಕಂಪದ ಅನುಭವವಾಗಿದೆ. ಮನೆ, ಕಚೇರಿ, ಕಟ್ಟಡಗಳ ಕಿಟಕಿ, ಗಾಜುಗಳು ನಲುಗಿದೆ.