Jul 6, 2021, 10:16 AM IST
ಬೆಂಗಳೂರು (ಜು. 06): ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಸವದಿಯವರ ಕಾರು ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50 ಕೂಡಲಸಂಗಮ ಕ್ರಾಸ್ ಬಳಿ ಘಟನೆ ನಡೆದಿದೆ. ಕೂಡಲೆಪ್ಪ ಬೋಳಿ(58) ಮೃತ ಬೈಕ್ ಸವಾರ. ಅಪಘಾತವಾದಾಗ ಚಿದಾನಂದ ಸವದಿ ಆ ಕಾರಿನಲ್ಲಿದ್ದರು. ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದರು. ಪೊಲೀಸರು ಚಿದಾನಂದ ಸವದಿಯವರನ್ನು ಬಚಾವ್ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್‌ಗೆ ಡಿಕ್ಕಿ, ಸವಾರ ಸಾವು: ಚಿದಾನಂದ ಸವದಿ ಸ್ಪಷ್ಟನೆ
'ಈಗಲೂ ನಮ್ಮನ್ನು ಯಾರೂ ಸಂಪರ್ಕಿಸುತ್ತಿಲ್ಲ. ಪೊಲೀಸರು, ಅಧಿಕಾರಿಗಳಿಗೆ ಈ ಕೇಸನ್ನು ಮುಚ್ಚಿ ಹಾಕುವಂತೆ ಸವದಿ ಒತ್ತಡ ಹಾಕುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವಾಗಬಾರದು. ಸಾವಿಗೆ ನ್ಯಾಯ ಸಿಗಲೇಬೇಕು' ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.