Mekedatu Padayatre: ನನ್ನ ಹುಟ್ಟು ಹೆಸರು ಕೆಂಪೇಗೌಡ, ನಂತರ ಶಿವಕುಮಾರ್ ಅಂತಿಟ್ರು: ಡಿಕೆಶಿ

Jan 9, 2022, 11:55 AM IST

ಬೆಂಗಳೂರು (ಜ. 09): ರಾಜಧಾನಿ ಸೇರಿ ಕಾವೇರಿ ಜಲಾನಯನ ಪ್ರದೇಶದ ಎರಡೂವರೆ ಕೋಟಿ ಜನರಿಗೆ ನೀರುಣಿಸುವ ಮೇಕೆದಾಟು ಯೋಜನೆಗೆ ಚಾಲನೆ ನೀಡಲು ಒತ್ತಡ ಹೇರುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದೆ. 

ಕನಕಪುರದಲ್ಲಿ ಸಭೆಯನ್ನುದ್ದೇಶಿಸಿ ಡಿಕೆ ಶಿವಕುಮಾರ್ ಮಾತನಾಡುತ್ತಾ, ಕನಕಪುರದಲ್ಲಿ 3 ಮಠಗಳಿವೆ. ನಾವು ಏನೇ ಕೆಲಸ ಮಾಡಿದರೂ ನಾವು ಆ ಮಠಕ್ಕೆ ಹೋಗಿ ಪ್ರಾರ್ಥನೆ ಮಾಡಿಕೊಂಡು ಬರುತ್ತೇವೆ. ನನ್ನ ಹುಟ್ಟು ಹೆಸರು ಕೆಂಪೇಗೌಡ. ಆ ನಂತರ ಕೆಂಪೇಗೌಡ ಹೆಸರನ್ನು ತೆಗೆದು, ಶಿವಕುಮಾರ್ ಎಂದು ಹೆಸರಿಟ್ಟರು' ಎಂದು ಸಂಗಮೇಶ್ವರ ಸ್ಥಳದ ಮಹತ್ವವನ್ನು ಸ್ಮರಿಸಿಕೊಂಡರು.