ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ, ರೈತ ಮುಖಂಡರೇ ಮಾಮೂಲಿ ವಸೂಲಿಯ ಆರೋಪ ಮಾಡಿದ್ದಾರೆ.
ಬೆಂಗಳೂರು (ಅ. 17): ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekhar) ವಿರುದ್ಧ, ರೈತ ಮುಖಂಡರೇ ಮಾಮೂಲಿ ವಸೂಲಿಯ ಆರೋಪ ಮಾಡಿದ್ದಾರೆ.
'ಕೆ ಆರ್ ಮಾರ್ಕೆಟ್‌ನಲ್ಲಿ ವರ್ತಕರಿಗೆ ಸಮಸ್ಯೆ ಆಗಿದೆ ಎಂದು ಪ್ರತಿಭಟನೆ ಮಾಡಿದೆವು. ಇದೀಗ ವರ್ತಕರಿಂದ ಪ್ರತಿ ತಿಂಗಳು 60 ಸಾವಿರ ವಸೂಲಿ ದಂಧೆ ಮಾಡುತ್ತಿದ್ದಾರೆ. ಜನರಿಂದ ಮಾಮೂಲಿ ವಸೂಲಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ನಮ್ಮನ್ನೇ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ' ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಗಂಭೀರ ಅರೋಪ ಮಾಡಿದ್ದಾರೆ. ಜೊತೆಗೆ ಮಾಮೂಲಿ ವಸೂಲಿಯ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ.