ಹಳ್ಳಿಗಳಲ್ಲಿ ಕೊರೋನಾ ಜಾಗೃತಿ ಮೂಡಿಸಲು ಮುಂದಾದ ವೈದ್ಯರು

May 29, 2021, 9:47 AM IST

ಬೆಂಗಳೂರು (ಮೇ. 29): ಹಳ್ಳಿಗಳಲ್ಲೂ ಸೋಂಕು ಹೆಚ್ಚಳವಾಗುತ್ತಿದೆ. ಕೊಡಗಿನ ಶನಿವಾರ ಸಂತೆಯಲ್ಲಿ ಜನಜಾಗೃತಿ ಮೂಡಿಸಲು ಶ್ವಾಸಕೋಶ ತಜ್ಞರಾದ ಡಾ. ಚೇತನ್ ಹಾಗೂ ಡಾ. ಸಂದೀಪ್ ಮುಂದಾಗಿದ್ದಾರೆ. 'ಹಳ್ಳಿಗಳಲ್ಲಿ ಪಲ್ಸ್ ಆಕ್ಸಿಮೀಟರ್ ಬಳಕೆ ಕುರಿತು ಜಾಗೃತಿ ಮೂಡಿಸಬೇಕಿದೆ. ಕೊರೊನಾ ಸಮಸ್ಯೆಯನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಹಳ್ಳಿ ಜನರಲ್ಲಿ ಭಯ ಹೋಗಲಾಡಿಸುವುದು ನಮ್ಮ ಮೊದಲ ಆದ್ಯತೆ. ವೈರಸ್ ಬಗ್ಗೆ ಭಯ ಹೋಗಲಾಡಿಸಿ, ಧೈರ್ಯ ತುಂಬಬೇಕಾಗಿದೆ' ಎಂದು ವೈದ್ಯರು ಏಷ್ಯಾನರಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಮಧುಮೇಹಿಗಳು ಕೊರೋನಾದಿಂದ ಬಚಾವಾಗೋದು ಹೇಗೆ?