ಈ ಬಾರಿ ಮೈಸೂರು ದಸರಾಗೆ ದುಬಾರೆಯ ಮೂರು ಆನೆಗಳು ಮಾತ್ರ ಭಾಗಿ

Sep 12, 2021, 5:24 PM IST

ಕೊಡಗು (ಸೆ. 12): ಮೈಸೂರು ದಸರಾಗೆ ಪ್ರತಿ ವರ್ಷ ದುಬಾರೆಯ  7 ಆನೆಗಳು ಪಾಲ್ಗೊಳ್ಳುತ್ತಿದ್ದವು. ಈ ವರ್ಷ  ಧನಂಜಯ, ಕಾವೇರಿ, ವಿಕ್ರಮ ಎಂಬ 3 ಆನೆಗಳು ಮಾತ್ರ ಪಾಲ್ಗೊಳ್ಳಲಿವೆ. ಅಂಬಾರಿ ಆನೆ ಜತೆ ಹೆಜ್ಜೆ ಹಾಕಲಿದ್ದಾಳೆ ಕಾವೇರಿ, ಪಟ್ಟದ ಆನೆಯಾಗಿ ವಿಕ್ರಮ, ಜಂಬೂಸವಾರಿಯಲ್ಲಿ ಧನಂಜಯ ಭಾಗಿಯಾಗಲಿದ್ದಾನೆ. ಕೋವಿಡ್ ಹಿನ್ನೆಲೆ ಮಾವುತ, ಕಾವಾಡಿಗರಿಗೆ ವ್ಯಾಕ್ಸಿನೇಷನ್‌ ಮಾಡಿಸಲಾಗಿದೆ. 

ದೇವಾಲಯದಿಂದ ಮೈಸೂರು ಒಡೆಯರ್ ಫೋಟೋ ತೆರವು..ಜಿಲ್ಲಾಡಳಿತ ಎಡವಟ್ಟು

ಕೊರೊನಾ ಇರೋದ್ರಿಂದ ಎಲ್ಲರಿಗೂ ಬೇಸರ ಮೂಡಿಸಿದೆ. ಮನುಷ್ಯರಿಗೆ ಕೊರೊನಾ ಬಂದು ಹೋಗ್ತಿದೆ. ನಮ್ಮ ಆನೆ, ಬೇರೆ ಪ್ರಾಣಿಗಳಿಗೆ ಬರೋದು ಬೇಡ. ಮೈಸೂರು ದಸರಾ, ಆನೆಗಳಿಗೆ ವಿಶೇಷ ಮಹತ್ವ ಇದೆ
ಹಾಗಾಗಿ ದಸರಾ ನಿಲ್ಲಿಸೋದಕ್ಕಾಗಲ್ಲ. ದೇವರೇ ಎಲ್ಲರನ್ನೂ ಚನ್ನಾಗಿ ನೋಡಿಕೊಳ್ಳಬೇಕು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಹಿರಿಯ ಮಾವುತ ದೋಬಿ ಮಾತನಾಡಿದ್ದಾರೆ.