Jul 5, 2021, 11:35 AM IST
ಬೆಂಗಳೂರು (ಜು. 05): ಇಂದಿನಿಂದ ರಾಜ್ಯದಲ್ಲಿ ಅನ್‌ಲಾಕ್ 3.0 ಜಾರಿಯಾಗುತ್ತಿದೆ. ಬಹುತೇಕ ದೇಗುಲಗಳು ಓಪನ್ ಆಗಿವೆ. ವ್ಯಾಪಾರ-ವಹಿವಾಟು ಆರಂಭವಾಗಿದೆ. ಮಲ್ಲೇಶ್ವರಂ ಮಾರುಕಟ್ಟೆ ತೆರೆದಿದೆ. ಗ್ರಾಹಕರು ಹಾಗೂ ವ್ಯಾಪಾರಿಗಳು ನಡುವೆ ಖರೀದಿ ಜೋರಾಗಿದೆ. 2 ತಿಂಗಳಿಂದ ವ್ಯಾಪಾರ ವಹಿವಾಟಿಲ್ಲದೇ ಬೇಸರಗೊಂಡಿದ್ದ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಎಂದಿನ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.