Jun 22, 2023, 2:46 PM IST
ಬೆಂಗಳೂರು (ಜೂ.22): ರಾಜ್ಯದಲ್ಲಿ ಕಳೆದೊಂದು ತಿಂಗಳಿಂದ ನಿಲ್ಲುತ್ತಲೇ ಇಲ್ಲ ಅಕ್ಕಿ ಗಲಾಟೆ. ಅನ್ನ ಭಾಗ್ಯಕ್ಕೆ ಸರ್ಕಾರದ ಪರದಾಡುತ್ತಿರುವ ಬೆನ್ನಲ್ಲೇ, ಸದ್ದಿಲ್ಲದೇ ಮಾರುಕಟ್ಟೆಯಲ್ಲಿರುವ ಅಕ್ಕಿಯ ದರವನ್ನು ಹೆಚ್ಚಳ ಮಾಡುವುದಕ್ಕೆ ಕರ್ನಾಟಕ ರಾಜ್ಯದ ರೈಸ್ ಮಿಲ್ ಮಾಲೀಕರು ಮುಂದಾಗಿದ್ದಾರೆ. ಅನ್ನಭಾಗ್ಯಕ್ಕೂ ಮುನ್ನವೇ ಅಕ್ಕಿ ದರ ಏರಿಕಯಾಗುವ ಮುನ್ಸೂಚನೆ ಕಂಡುಬರುತ್ತಿದೆ.
ಅಕ್ಕಿ ಕರ್ನಾಟಕದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಒಂದು ಕಡೆ ಕಾಂಗ್ರೆಸ್ ಕೇಂದ್ರದ ವಿರುದ್ಧ ಅಕ್ಕಿ ಕೊಡ್ತಿಲ್ಲ ಅನ್ನೋ ಕಾರಣಕ್ಕೆ ಪ್ರತಿಭಟನೆ ಮಾಡ್ತಾ ಇದ್ರೆ ಇನ್ನೊಂದು ಕಡೆ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಬೀದಿಗಿಳಿದಿದೆ. ಈ ನಡುವೆ ಅಕ್ಕಿ ಮಿಲ್ ಮಾಲೀಕರು ಅಕ್ಕಿ ದರವನ್ನ ಹೆಚ್ಚಿಸೋ ಚಿಂತನೆಯಲ್ಲಿ ಇದಾರೆ. ಯಾಕಾಗಿ ಅಕ್ಕಿ ಬೆಲೆ ಏರಿಕೆ ಮಾತು ಬಂದಿರೋದು..? ಅದರ ಹಿಂದಿನ ಕಾರಣವೇನು? ಅಕ್ಕಿ ದರವನ್ನ ಕೆಜಿಗೆ 5 ರಿಂದ 10 ರೂಪಾಯಿ ಹೆಚ್ಚಳ ಮಾಡೋದಕ್ಕೆ ಮಿಲ್ ಮಾಲೀಕರು ಕಾರಣವನ್ನೂ ಕೊಡ್ತಿದ್ದಾರೆ.
ಅಕ್ಕಿ ದರ ಏರಿಕೆ ಆದರೆ ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗೋದು ಖಚಿತ. ಆದರೆ ಅಕ್ಕಿತ ದರ ಏರಿಕೆ ಮಾಡದಿದ್ದರೆ ರೈಸ್ ಮಿಲ್ ಮಾಲೀಕರು ಬದುಕೋಕೆ ಆಗೋದಿಲ್ಲ ಅನ್ನೋದು ಎಂದು ಹೇಳುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆ ಬರೋದನ್ನ ಬಿಪಿಎಲ್ ಕಾರ್ಡ್ ಇರೋರು ಎದುರು ನೋಡ್ತಾ ಇದ್ದರೆ, ಅಕ್ಕಿ ದರ ಏರಿಕೆ ಸುಳಿವನ್ನ ಕೊಟ್ಟಿರೋ ಅಕ್ಕಿ ಮಿಲ್ ಮಾಲೀಕರು ಮಧ್ಯಮ ವರ್ಗಕ್ಕೆ ಶಾಕ್ ಕೊಟ್ಟಿದ್ದಾರೆ.