Dec 1, 2021, 1:38 PM IST
ಬೆಂಗಳೂರು (ಡಿ. 01): ಒಮಿಕ್ರಾನ್ ಭೀತಿ ಹಿನ್ನಲೆ (Omicron Threat) ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಆರೋಗ್ಯ ಸಚಿವ ಡಾ. ಸುಧಾಕರ್ (Dr. Sudhakar) ನೇತೃತ್ವದಲ್ಲಿ ನಿನ್ನೆ ಅಧಿಕಾರಿಗಳ ಸಭೆ ನಡೆದಿದೆ. ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದೆ.
Omicron Variant Threat: ಲಾಕ್ಡೌನ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ
ಆರೋಗ್ಯ ಸಿಬ್ಬಂದಿ, ಫ್ರಂಟ್ ಲೈನ್ ವಾರಿಯರ್ಸ್‌ಗಳು ಎರಡನೇ ಡೋಸ್ ತೆಗೆದುಕೊಂಡು 7-8 ತಿಂಗಳಾಗಿದೆ. ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಇವರಿಗೆ 3 ನೇ ಡೋಸ್/ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಸಿಎಂ, ಕೇಂದ್ರದ ಜೊತೆ ಚರ್ಚೆ ನಡೆಸಲಿದ್ದಾರೆ. ಒಮಿಕ್ರಾನ್ ಮಣಿಸಲು ಜನರ ಜಾಗ್ರತೆ, ಜಾಗೃತಿ ಎರಡೂ ಬೇಕಾಗುತ್ತದೆ. ಎಲ್ಲರೂ ನಮ್ಮ ಜೊತೆ ಕೈ ಜೋಡಿಸಿ ಎಂದು ಡಾ. ಸುಧಾಕರ್ ಹೇಳಿದ್ದಾರೆ.