
ಡಿಸೆಂಬರ್ ಒಳಗೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ, ಗುಜರಾತ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ, ಬಿಜೆಪಿಯಿಂದ ಸರ್ಕಾರದ ವಿರುದ್ದ ಜನಾಕ್ರೋಶ ಹೋರಾಟ, ದ್ವಿತೀಯ ಪಿಯುಸಿ ಫಲಿತಾಂಶ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆ ವಾದ ವಿವಾದ ಡಿಸೆಂಬರ್ ತಿಂಗಳಿಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತದೆ. ಇದೀಗ ಈ ಡಿಸೆಂಬರ್ ಡೆಡ್‌ಲೈನ್‌ಗೆ ಡಿಕೆ ಶಿವಕುಮಾರ್ ಬಣದ ನಾಯಕ ಶಿವಗಂಗಾ ಬಸವರಾಜ್ ತುಪ್ಪ ಸುರಿದಿದ್ದಾರೆ. ಡಿಸೆಂಬರ್ ಒಳಗೆ ಸಿಎಂ ಕುರ್ಚಿ ಆಗದಿದ್ದರೆ ಬಂದು ಕೇಳಿ ಎಂದಿದ್ದಾರೆ. ಈ ಮೂಲಕ ಬಸವರಾಜ್, ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಸೂಚನೆ ನೀಡಿದ್ದರೆ. ಇತ್ತ ಕೆಪಿಸಿಸಿ ಪಟ್ಟಕ್ಕೆ ಈಶ್ವರ್ ಖಂಡ್ರೆ ಒಲಿಯಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.