Anti Conversion Bill: ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ, ನಿಲ್ಲದ ಎಂಇಎಸ್ ಗೂಂಡಾಗಿರಿ

Dec 22, 2021, 10:54 AM IST

ಬೆಂಗಳೂರು (ಡಿ. 22): ರಾಜ್ಯದಲ್ಲಿ ಒತ್ತಾಯ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕನಿಷ್ಠ 3 ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021’ (Anti Conversion Bill) ಅನ್ನು ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಮತಾಂತರ ನಿಷೇಧ ಕಾಯ್ದೆ ಮಂಡನೆ: ವಿಧೇಯಕದ ಪ್ರಮುಖ ಅಂಶಗಳು ಇಲ್ಲಿವೆ

ಸೊಕ್ಕು ಮುರಿದರೂ ಶಿವಸೇನೆ (Shivasene) ಗೂಂಡಾಗಿರಿ ನಿಂತಿಲ್ಲ. ಕನ್ನಡಿಗರನ್ನು ಕಂಡ ಕಂಡಲ್ಲಿ ಹಲ್ಲೆ ನಡೆಸುತ್ತಿದ್ದಾರೆ. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಇನ್ನು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ಎಂಇಎಸ್ ಪುಂಡಾಟಕ್ಕೆ ಸಂಚಾರ ನಿಲ್ಲಿಸಿದ ಸಾರಿಗೆ ಬಸ್‌ಗಳು. ತಮ್ಮ ಊರುಗಳಿಗೆ ಬರಲಾಗದೇ ಜನರು ಪರದಾಡುವಂತಾಗಿದೆ.