ಹೊಸದುರ್ಗದಲ್ಲಿ (Hosadurga) ಬಲವಂತದ ಮತಾಂತರವಾಗಿಲ್ಲ (Conversion) ಎಂದು ವರದಿ ನೀಡಿದ ತಹಶೀಲ್ದಾರ್‌ಗೆ ಶಾಕ್..! ಹೊಸದುರ್ಗ ತಹಶೀಲ್ದಾರ್ ತಿಪ್ಪೇಸ್ವಾಮಿಯವರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ.
ಬೆಂಗಳೂರು (ಡಿ. 18): ಹೊಸದುರ್ಗದಲ್ಲಿ (Hosadurga) ಬಲವಂತದ ಮತಾಂತರವಾಗಿಲ್ಲ (Conversion) ಎಂದು ವರದಿ ನೀಡಿದ ತಹಶೀಲ್ದಾರ್‌ಗೆ ಶಾಕ್..! ಹೊಸದುರ್ಗ ತಹಶೀಲ್ದಾರ್ ತಿಪ್ಪೇಸ್ವಾಮಿಯವರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ. ಹೊಸ ತಹಶೀಲ್ದಾರರಾಗಿ ಮಲ್ಲಿಕಾರ್ಜುನರನ್ನು ನಿಯೋಜನೆ ಮಾಡಲಾಗಿದೆ.
ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ವಿಧಾನಸಭೆಯಲ್ಲಿ ಬಲವಂತದ ಮತಾಂತರದ ಬಗ್ಗೆ ಪ್ರಸ್ತಾಪಿಸಿದ್ದರು. ತಮ್ಮ ತಾಯಿಯೂ ಮತಾಂತರವಾಗಿರುವ ಬಗ್ಗೆ ಹೇಳಿಕೊಂಡಿದ್ದರು. ಹೊಸದುರ್ಗ ಭಾಗದಲ್ಲಿ ಮತಾಂತರ ಹೆಚ್ಚಾಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.