ಛತ್ತೀಸಘಡದಿಂದ ಅಕ್ಕಿ ಖರೀದಿಗೆ ಸಜ್ಜಾದ ರಾಜ್ಯ, ಸರ್ಕಾರದ ವಿರುದ್ದ ಹಿಂದೂಪರ ಸಂಘಟನೆ ಪ್ರೊಟೆಸ್ಟ್!

Jun 16, 2023, 11:47 PM IST

ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆ ವಾಪಸ್, ಗೋ ಹತ್ಯಾ ನಿಷೇಧ ಕಾಯ್ದೆ ವಾಪಸ್ ಹಾಗೂ ಪಠ್ಯ ಪುಸ್ತಕರ ಪರಿಷ್ಕರಣೆ ವಿರುದ್ಧ ಹಿಂದೂ ಸಂಘಟನೆಗಳು ಭಾರಿ ಪ್ರತಿಭಟನೆ ಮಾಡಿದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಆರೋಪಿಸಿರುವ ರಾಜ್ಯ ಕಾಂಗ್ರೆಸ್, ಇದೀಗ ಜಿಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮುಂದಾಗಿದೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ವೇದಿಕೆ ಹದಗೊಳಿಸಲು ಕಾಂಗ್ರೆಸ್ ಎಲ್ಲಾ ತಯಾರಿ ಮಾಡಿಕೊಂಡಿದೆ. ಇತ್ತ ಚತ್ತೀಸಘಡ ಸರ್ಕಾರದಿಂದ ಅಕ್ಕಿ ಖರೀದಿ ವ್ಯವಹಾರ ಬಹುತೇಕ ಅಂತಿಮಗೊಂಡಿದೆ. ನಾಳೆ ಸಚಿವ ಕೆಹೆಚ್ ಮುನಿಯಪ್ಪ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಅಧಿಕೃತ ಹೇಳಿಕೆ ನೀಡಲಿದ್ದಾರೆ.