News Hour: ರಾಜ್ಯದ ಜನರ ಕೊರಳಲ್ಲಿ ಹುಲಿ ಉಗುರು ಹುಡುಕುತ್ತಾ ಕುಳಿತ ಅರಣ್ಯ ಇಲಾಖೆ!

News Hour: ರಾಜ್ಯದ ಜನರ ಕೊರಳಲ್ಲಿ ಹುಲಿ ಉಗುರು ಹುಡುಕುತ್ತಾ ಕುಳಿತ ಅರಣ್ಯ ಇಲಾಖೆ!

Published : Oct 27, 2023, 11:40 PM IST

ಬಹುಶಃ ಕರ್ನಾಟಕ ಅರಣ್ಯ ಇಲಾಖೆಗೆ ಈ ಒಂದು ವಾರದಲ್ಲಿ ಜನ ಬೈದಷ್ಟು ಮತ್ಯಾವ ಸಮಯದಲ್ಲೂ ಮಾತಾನಾಡಿರಲಿಕ್ಕಿಲ್ಲ. ದೊಡ್ಡ ಸಾಹಸ ಎನ್ನುವಂತೆ ವರ್ತೂರು ಸಂತೋಷ್‌ ಅವರನ್ನು ಬಿಗ್‌ ಬಾಸ್‌ ಶೋಗೆ ಹೋಗಿ ಬಂಧಿಸಿದ್ದ ಅರಣ್ಯ ಇಲಾಖೆಗೆ ಆ ನಂತರ ಬಂದ ಒಂದೊಂದು ಕೇಸ್‌ಗಳು ತಲೆನೋವು ತಂದುಕೊಟ್ಟಿತು.
 

ಬೆಂಗಳೂರು (ಅ.27): ಹುಲಿ ಉಗುರಿನ ಕೇಸ್‌ನಲ್ಲಿ ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯ ಮಾಡುವ ಇರಾದೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ರಾಜ್ಯದ ಜನರು ಹಾಗೂ ಮಾಧ್ಯಮಗಳಿಂದಲೇ ಛೀಮಾರಿ ಹಾಕಿಸಿಕೊಂಡಿದ್ದಾರೆ. ಹಾಗಿದ್ದರೂ, ರಾಜ್ಯದ ಜನರ ಕೊರಳಲ್ಲಿ ಹುಲಿ ಉಗುರು ಇದೆಯೇ ಇಲ್ಲವೇ ಎನ್ನುವುದನ್ನು ನೋಡವುದನ್ನು ಮಾತ್ರ ಮುಂದುವರಿಸಿದೆ.

ರಾಜ್ಯಾದ್ಯಂತ ಸರ್ಕಾರದ ಇಬ್ಬಗೆ ನೀತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅವರಿಗೆ ಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹುಲಿ ಉಗುರು ಲಾಕೆಟ್ ಧರಿಸಿದ್ದ ಕೇಸ್‌ನಲ್ಲಿ ಅವರಿಗೆ ಬೇಲ್‌ ಸಿಕ್ಕಿದೆ. ಎರಡನೇ ಎಸಿಜೆಎಂ ಕೋರ್ಟ್‌ನಿಂದ ಶುಕ್ರವಾರ ಅವರಿಗೆ ಜಾಮೀನು ಲಭ್ಯವಾಗಿದೆ.

News Hour: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಆಪರೇಷನ್‌ ಹುಲಿ ಉಗುರು!

ಈ ನಡುವೆ ಶುಕ್ರವಾರ  ಸಚಿವೆ ಹೆಬ್ಬಾಳ್ಕರ್ ಮಗ, ಅಳಿಯನ ಲಾಕೆಟ್ ವಶಕ್ಕೆ ಪಡೆಯಲಾಗಿದೆ. ಮಾಜಿ ಡಿಸಿಎಂ ಸವದಿ ಪುತ್ರನ ಕೊರಳಲ್ಲೂ ಲಾಕೆಟ್ ಕಂಡುಬಂದಿದೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗ್ತಿದ್ದಂತೆ ಸಚಿವರ ಮನೆಗೆ ಹೋಗಿ ಲಾಕೆಟ್‌ ನೀಡುವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕಾರಣಿಗಳು ಯಥಾಪ್ರಕಾರದ ಇದು ನಕಲಿ ಪೆಂಡೆಂಟ್‌ ಎನ್ನುವ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.

18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?