Covid 19: ಹಾಟ್‌ಸ್ಪಾಟ್ ಆಗ್ತಿದೆಯಾ ಬೆಂಗಳೂರು.? ಅಪಾಯದ ಕರೆಗಂಟೆ

Jan 3, 2022, 3:47 PM IST

ಬೆಂಗಳೂರು (ಜ. 03): ರಾಜ್ಯದಲ್ಲಿ ಸದ್ಯ 66 ಮಂದಿಯಲ್ಲಿ ಒಮಿಕ್ರೋನ್‌ (Omicron) ಪತ್ತೆಯಾಗಿದೆ. ವಿದೇಶದಿಂದ ಬಂದ ಪ್ರಯಾಣಿಕರಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಒಮಿಕ್ರೋನ್‌ ಪತ್ತೆ ಆಗಿದ್ದರೂ ಪ್ರಯಾಣದ ಹಿನ್ನೆಲೆಯೇ ಇಲ್ಲದವರಲ್ಲಿಯೂ ಒಮಿಕ್ರೋನ್‌ (Omicron) ಕಂಡು ಬಂದಿದೆ. ಆದರೆ ಸೋಂಕು ಹರಡುತ್ತಿರುವ ವೇಗ ಗಮನಿಸಿದರೆ ಒಮಿಕ್ರೋನ್‌ ರಾಜ್ಯದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಹರಡಿರುವ ಲಕ್ಷಣಗಳು ಗೋಚರಿಸುತ್ತಿದೆ.

 ಕೊರೋನಾ(Coronavirus) ಪ್ರಕರಣಗಳ ಸಂಖ್ಯೆ ಸಹ ಏರುಗತಿಯಲ್ಲಿ ಸಾಗಿದ್ದು, 190 ದಿನಗಳ ನಂತರ ಸೋಂಕಿನ ಪ್ರಕರಣಗಳ ಸಂಖ್ಯೆ 923 ತಲುಪಿದೆ. ಮೂವರು ಮೃತಪಟ್ಟಿದ್ದಾರೆ.

ಹೊಸದಾಗಿ 488 ಪುರುಷರು ಮತ್ತು 435 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 12,65,351ಕ್ಕೆ ಏರಿಕೆ ಆಗಿದೆ. 125 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರ ಸಂಖ್ಯೆ 12,40,274 ತಲುಪಿದೆ. ಮೂವರ ಸಾವಿನಿಂದ ಈವರೆಗೆ 16,406 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸೋಂಕಿಗೆ ಒಳಗಾಗಿರುವ ಒಟ್ಟು 8,671 ಜನರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ(Department of Health) ಮಾಹಿತಿ ನೀಡಿದೆ.