News Hour: ನಾವು ಕೊಟ್ಟ ಅನ್ನಭಾಗ್ಯ ಅಕ್ಕಿಯಿಂದ ರಾಮಮಂದಿರದ ಮಂತ್ರಾಕ್ಷತೆ!

News Hour: ನಾವು ಕೊಟ್ಟ ಅನ್ನಭಾಗ್ಯ ಅಕ್ಕಿಯಿಂದ ರಾಮಮಂದಿರದ ಮಂತ್ರಾಕ್ಷತೆ!

Published : Jan 09, 2024, 10:58 PM IST

ನಾವು ಕೊಟ್ಟ ಅನ್ನಭಾಗ್ಯದ ಅಕ್ಕಿಯಿಂದ ಅಯೋಧ್ಯೆ ಶ್ರೀರಾಮ ಮಂದಿರದ ಮಂತ್ರಾಕ್ಷತೆ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿರುವ ಮಾತು ವಿವಾದಕ್ಕೆ ಕಾರಣವಾಗಿದೆ. ಈ ಮಾತಿಗೆ ಡಿಕೆಶಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
 

ಬೆಂಗಳೂರು (ಜ.9): ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆ ದಿನ ಸನಿಹವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಇದರ ಕ್ರೆಡಿಟ್‌ ವಾರ್‌ ಜೋರಾಗಿ ನಡೆಯುತ್ತಿದೆ. ಮಂಗಳವಾರ ರಾಜ್ಯ ಕಾಂಗ್ರೆಸ್‌ ತನ್ನ ಟ್ವಿಟರ್‌ನಲ್ಲಿ ರಾಮ ಮಂದಿರದ ಪೂಜೆಗೆ ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್‌ ಎಂದು ಹೇಳುವ ಮೂಲಕ ಕ್ರೆಡಿಟ್‌ ವಾರ್‌ ಶುರು ಮಾಡಿತು.

ಈ ಕುರಿತಾಗಿ ಮಾತನಾಡುವ ವೇಳೆ ಡಿಸಿಎಂ ಡಿಕೆ ಶಿವಕುಮಾರ್‌, ಉದ್ಘಾಟನೆಗೆ ನಮ್ಮನ್ನ ಕರೆದಿಲ್ಲ, ನನ್ನನ್ನೂ ಆಹ್ವಾನಿಸಿಲ್ಲ. ಮುಖ್ಯಮಂತ್ರಿಗಳನ್ನೂ ಸಹ ಕರೆದಿಲ್ಲ. ನಾನು ಶಿವ ಭಕ್ತ. ಎಲ್ಲ ದೇವರುಗಳು ನನ್ನ ಹೃದಯದಲ್ಲಿದೆ.  ನಮ್ಮ ಅಕ್ಕಿ ಮಂತ್ರಾಕ್ಷತೆಗೆ ಉಪಯೋಗಿಸಿಕೊಳ್ತಿದ್ದಾರೆ. ಅನ್ನಭಾಗ್ಯ ಯೋಜನೆ ಅಕ್ಕಿಯನ್ನೇ ಮಂತ್ರಾಕ್ಷತೆಗೆ ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇಲ್ಲಿದೆ ಸಾಕ್ಷಿ, ದೇಶದ ಅತಿದೊಡ್ಡ ತೀರ್ಥಕ್ಷೇತ್ರ-ಪ್ರವಾಸಿ ಸ್ಥಳವಾಗುವ ಹಾದಿಯಲ್ಲಿ ಅಯೋಧ್ಯೆ!

ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ಕಾಳು ಅಕ್ಕಿಯನ್ನೂ ನೀವು ಕೊಟ್ಟಿಲ್ಲ. ಮೊದಲು ರಾಮನೇ ಇಲ್ಲ ಎಂದು ಹೇಳಿದ್ರಿ, ಈಗ ವಿವಾದ ಮಾಡೋದಕ್ಕೆ ಹೊರಟಿದ್ದೀರಿ ಎಂದು ಕೇಂದ್ರ ಸಚಿವವ ಪ್ರಲ್ಹಾದ್‌ ಜೋಶಿ, ಪ್ರತಾಪ್‌ ಸಿಂಹ, ಈಶ್ವರಪ್ಪ ಕಾಂಗ್ರೆಸ್‌ ಹಾಗೂ ಡಿಕೆ ಶಿವಕುಮಾರ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more