ಈಶ ಫೌಂಡೇಶನ್‌ನ ಸದ್ಗುರು ವಾಸುದೇವ್ ನೇತೃತ್ವದಲ್ಲಿ 'ಮಣ್ಣು ಉಳಿಸಿ' (Save Soil) ಅಭಿಯಾನ ಅರಮನೆ ಮೈದಾನದಲ್ಲಿಂದು ನೆರವೇರಿತು.
ಬೆಂಗಳೂರು (ಜೂ. 19): ಈಶ ಫೌಂಡೇಶನ್‌ನ (Isha Foundation) ಸದ್ಗುರು ವಾಸುದೇವ್ ನೇತೃತ್ವದಲ್ಲಿ 'ಮಣ್ಣು ಉಳಿಸಿ' (Save Soil) ಅಭಿಯಾನ ಅರಮನೆ ಮೈದಾನದಲ್ಲಿಂದು ನೆರವೇರಿತು. ಅಭಿಯಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ, ಅರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಗಣ್ಯರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿದೆ.
ಅಭಿಯಾನದ ಭಾಗವಾಗಿ ಮಾರ್ಚ್ 21ರಂದು ಯೂರೋಪ್‌ನಿಂದ ಬೈಕ್ ಯಾತ್ರೆ ಆರಂಭಿಸಿದ್ದು, ಬೆಂಗಳೂರಿಗೆ ತಲುಪಿ 27298 ಕಿ.ಮೀ ಪೂರ್ಣಗೊಂಡಿದೆ. ಯುರೋಪ್, ಮಧ್ಯಏಷ್ಯಾದ 27 ದೇಶಗಳು, ಭಾರತದ 9 ರಾಜ್ಯಗಳಿಗೆ ತೆರಳಿ ಅಲ್ಲಿನ ಸರ್ಕಾರಗಳಿಗೆ ಮಣ್ಣಿನ ಅಧ್ಯಯನದ ವರದಿ ನೀಡಿ, ಮಣ್ಣನ್ನು ಉಳಿಸಲು ಕೈಗೊಳ್ಳಬೇಕಾದ ಕಾರ್ಯನೀತಿಯನ್ನು ನೀಡಲಾಗಿದೆ. ಹಲವು ದೇಶಗಳಿಗೆ ಕಾರ್ಯನೀತಿಯನ್ನು ಆನ್‌ಲೈನ್ ಮೂಲಕ ತಲುಪಿಸಲಾಗಿದೆ. ಈವರೆಗೂ 74 ದೇಶಗಳು, ಭಾರತದ 9 ರಾಜ್ಯಗಳು ಮಣ್ಣನ್ನು ಉಳಿಸುವ ಕ್ರಮಗಳನ್ನು ಕೈಗೊಳ್ಳಲು ಒಪ್ಪಿವೆ.