ವನ್ಯಜೀವಿ ಸಂರಕ್ಷಣ ಅಭಿಯಾನ: ಕಾವೇರಿ ವನ್ಯಜೀವಿಧಾಮದಲ್ಲೊಂದು ಸುತ್ತು

Aug 4, 2020, 3:36 PM IST

ಮುತ್ತತ್ತಿ(ಆ.04): ಜೀವನದಿ ಕಾವೇರಿ ಹೆಸರನ್ನೇ ಅನ್ವರ್ಥಕ ನಾಮವನ್ನಾಗಿಸಿಕೊಂಡಿರುವ ಕಾವೇರಿ ವನ್ಯಜೀವಿಧಾಮ ಎಲೆ ಉದುರುವ ಕಾಡಿನಿಂದ ಹಿಡಿದು ಕುರುಚಲು ಸಸ್ಯಗಳನ್ನು ಹೊಂದಿದೆ. 

ಮನುಷ್ಯ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಾಡುಗಳು ನಾಶವಾಗುತ್ತಿವೆ. ಪ್ರಾಕೃತಿಕ ಅಸಮತೋಲನದಿಂದಾಗಿ ಕಾಡು ಪ್ರಾಣಿಗಳು ನಾಡಿನತ್ತ ಬರಲಾರಂಭಿಸಿದೆ. ಹೀಗಾಗಿ ವನ್ಯ ಜೀವಿಗಳ ಸಂರಕ್ಷಣೆಗೆ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಕಳೆದ 3 ವರ್ಷಗಳಿಂದ ವನ್ಯಜೀವಿ ಸಂರಕ್ಷಣೆ ಮಾಡುತ್ತಿದೆ.ಇದರ ಮುಂದುವರೆದ ಭಾಗವಾಗಿ ಕಾವೇರಿ ವನ್ಯಜೀವಿ ಧಾಮಕ್ಕೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ.

ವನ್ಯಜೀವಿ ಸಂರಕ್ಷಣಾ ಅಭಿಯಾನ: ನಾಗರಹೊಳೆಯಲ್ಲಿ ಒಂದು ಸುತ್ತು

ಕರ್ನಾಟಕ ರಾಜ್ಯದ ರಾಮನಗರ, ಮಂಡ್ಯ, ಚಾಮರಾಜನಗರದ 1027 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಬ್ಬಿರುವ ಕಾವೇರಿ ವನ್ಯಜೀವಿ ಧಾಮದಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ರೋರಿಂಗ್ ಸ್ಟಾರ್ ಖ್ಯಾತಿಯ ಶ್ರೀ ಮುರುಳಿ ನಮ್ಮ ಅಭಿಯಾನಕ್ಕೆ ಸಾಥ್ ನೀಡಿದರು.ಕಾವೇರಿ ವನ್ಯಜೀವಿ ಅಭಿಯಾನದಲ್ಲಿ ಪಾಲ್ಗೊಂಡು ಕಣ್ಣಿಗೆ ಕಟ್ಟುವಂತೆ ಆ ಅನುಭವಗಳನ್ನು ಹಂಚಿಕೊಂಡಿದ್ದಾರೆ.