ಕರ್ನಾಟಕ ರಾಜ್ಯದಲ್ಲಿ ಹಿಂದೂ ಮುಸ್ಲಿಂ ವಿಚಾರವಾಗಿ ಪ್ರತಿನಿತ್ಯ ಒಂದಲ್ಲಾ ಒಂದು ವಿಚಾರ ಸುದ್ದಿಯಲ್ಲಿರುತ್ತದೆ. ಇಷ್ಟಲ್ಲದರ ನಡುವೆಯೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಶ್ರಮ ವಹಿಸಿದ್ದಾರೆ. ಆದರೆ ಈಗ ಸ್ವತಃ ಪೊಲೀಸರೇ ಧರ್ಮ ದಂಗಲ್ ಗೆ ಎಂಟ್ರಿಯಾಗಿದ್ದಾರೆ ಅನ್ನುವ ಅನುಮಾನ ಕಾಡಿದೆ.
ಬೆಂಗಳೂರು (ಏ.27): ರಾಜ್ಯದಲ್ಲಿ ಕಳ್ಳರು, ಕೊಲೆಗಡುಕರು ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಕರ್ನಾಟಕ ಪೊಲೀಸ್ ಈ ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಸ್ವತಃ ಪೊಲೀಸರೇ ಅಪರಾಧಿ ಸ್ಥಾನದಲ್ಲಿರುವ ನೀಡಿರುವ ಈ ಪ್ರಕರಣಕ್ಕೆ ಕಾರಣವಾಗಿರುವುದು ಧರ್ಮ ದಂಗಲ್.
ಹಿಂದೂ-ಮುಸ್ಲಿಂ ನಡುವೆ ಇಡೀ ಸಂಘರ್ಷಕ್ಕೆ ಕಾರಣವಾಗಿದ್ದು ಹಿಜಾಬ್ ವಿಚಾರ. ಹಿಜಾಬ್ ಸುದ್ದಿಯಿಂದ ಆರಂಭವಾದ ದಂಗಲ್ ಇಂದು ತನ್ನ ಬಾಹುಗಳನ್ನು ಬಹುತೇಕ ಎಲ್ಲಾ ವಿಚಾರಗಳಿಗೂ ವ್ಯಾಪಿಸಿದೆ. ಹಿಜಾಬ್ ನಿಂದ ಆರಂಭವಾದ ಗಲಾಟೆ, ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಎದುರು ಬೆಂಕಿ ಹಾಕುವವರೆಗೂ ಹೋಗಿ ಮುಟ್ಟಿದೆ. ಇಡೀ ಧರ್ಮ ದಂಗಲ್ ಸಂದರ್ಭದಲ್ಲಿ ಆಗಬಹುದಾಗಿದ್ದ ದೊಡ್ಡ ಅನಾಹುತಗಳನ್ನು ತಪ್ಪಿಸುವಲ್ಲಿ ಪೊಲೀಸರು ಅಪಾರ ಶಮ್ರವಹಿಸಿದ್ದಾರೆ.
ಹುಬ್ಬಳ್ಳಿ ಗಲಭೆಗೆ ಸಿದ್ದರಾಮಯ್ಯ ಪ್ರೇರಣೆ: ನಳಿನ್ ಕುಮಾರ್ ಕಟೀಲ್
ಶಾಂತಿ ಕಾಪಾಡಲು ಪೊಲೀಸರು ಹಗಲಿರುಳು ಶ್ರಮ ವಹಿಸಿರುವ ವೇಳೆ ಮಂಗಳೂರಿನ ಬಜ್ಪೆ ಪೊಲೀಸರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತನೊಬ್ಬನ ಮೇಲೆ ಯಾವುದೇ ದೂರುಗಳಿಲ್ಲದ ನಡುವೆಯೂ ಠಾಣೆಗೆ ಕರೆಸಿ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಕೊಟ್ಟಿರೋದು ಈಗ ವಿವಾದದ ಮೂಲವಾಗಿದೆ.