ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Santosh Suicide Case) ಪ್ರಕರಣ ಬೇರೆ ಬೇರೆ ಆಯಾಮ ಪಡೆದಿದೆ. ಸಂತೋಷ್ ಓಡಾಡಿದ ಸ್ಥಳಗಳಲ್ಲಿ ಖಾಕಿ ಮಹಜರು ನಡೆಸಿದೆ. ತನಿಖೆ ತೀವ್ರಗೊಂಡಿದೆ.
ಬೆಂಗಳೂರು (ಏ. 16): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Santosh Suicide Case) ಪ್ರಕರಣ ಬೇರೆ ಬೇರೆ ಆಯಾಮ ಪಡೆದಿದೆ. ಸಂತೋಷ್ ಓಡಾಡಿದ ಸ್ಥಳಗಳಲ್ಲಿ ಖಾಕಿ ಮಹಜರು ನಡೆಸಿದೆ. ತನಿಖೆ ತೀವ್ರಗೊಂಡಿದೆ.
ಸಂತೋಷ್ ಮೃತದೇಹ ಪತ್ತೆಯಾಗಿದ್ದ ಲಾಡ್ಜ್‌ನಲ್ಲಿ ನಿಷೇಧಿತ ಮೋನೋಕ್ರೋಟೋಫೋಸ್ ಕೀಟನಾಶಕ ಪತ್ತೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ಸಂತೋಷ್ ಇದನ್ನು ಸೇವಿಸಿದ್ದರೇ ಎಂಬ ಅನುಮಾನ ಮೂಡಿಸಿದೆ.
ಉಡುಪಿಯ (Udupi) ಲಾಡ್ಜ್‌ಗೆ ಬರುವ ಮುನ್ನ ಸಂತೋಷ್ ಚಿಕ್ಕಮಗಳೂರಿನಿಂದ (Chikkamagaluru) ವಿಷ ಖರೀದಿಸಿ ತಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಂತೋಷ್ ಆತ್ಮಹತ್ಯೆ ಪ್ರಕರಣ ಬೇಧಿಸಲು ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಉಡುಪಿಗೆ ಬರುವ ಮೊದಲು ಚಿಕ್ಕಮಗಳೂರು ಮತ್ತು ದಾವಣಗೆರೆಗಳಿಗೆ (Davanagere) ತೆರಳಿ ಅಲ್ಲಿ ಹೋಮ್ ಸ್ಟೇಗಳಲ್ಲಿ ಉಳಿದುಕೊಂಡಿರುವುದಾಗಿ ಸಂತೋಷ್ನೊಂದಿಗೆ ಉಡುಪಿಗೆ ಬಂದಿದ್ದ ಸ್ನೇಹಿತರಾದ ಮೇದಪ್ಪ ಮತ್ತು ಪ್ರಶಾಂತ್ ಶೆಟ್ಟಿಬಾಯ್ಬಿಟ್ಟಿದ್ದಾರೆ.