- ಜಮೀರ್ ನಿವಾಸದಲ್ಲಿ ಇ.ಡಿ ದಾಳಿ ವೇಳೆ ಹಲವು ಬೇನಾಮಿ ಅಕೌಂಟ್ ಪತ್ತೆ
- ಮನೆ ನಿರ್ಮಾಣದಿಂದ ಹಿಡಿದು ಐಎಂವರೆಗಿನ ವ್ಯವಹಾರಗಳನ್ನು ಇ.ಡಿ. ವಿಚಾರಣೆ
- ಮಂಗಳೂರಿನ ಪ್ರಭಾವಿ ಬಿಸ್ನೆಸ್‌ಮ್ಯಾನ್ ಜೊತೆ ವ್ಯವಹಾರ..?
ಬೆಂಗಳೂರು (ಆ. 06): ನಿವಾಸದಲ್ಲಿ ಇ.ಡಿ ದಾಳಿ ವೇಳೆ ಹಲವು ಬೇನಾಮಿ ಅಕೌಂಟ್ ಪತ್ತೆಯಾಗಿವೆ. ಹಾರ್ಡ್ ಡಿಸ್ಕ್ ಸಿಕ್ಕಿದೆ. ಮನೆ ನಿರ್ಮಾಣದಿಂದ ಹಿಡಿದು ಐಎಂವರೆಗಿನ ವ್ಯವಹಾರಗಳನ್ನು ಇ.ಡಿ. ಜಾಲಾಡಿದೆ.
ಈ ವೇಳೆ ಮಂಗಳೂರಿನ ಪ್ರಭಾವಿ ಬಿಸ್ನೆಸ್‌ಮ್ಯಾನ್ ಜೊತೆಗೂ ವ್ಯವಹಾರ ನಡೆಸಿರುವ ಮಾಹಿತಿ ಸಿಕ್ಕಿದೆ. ಹಲವು ಹಡಗುಗಳನ್ನು ಹೊಂದಿರುವ ಆ ಬಿಸ್ನೆಸ್‌ಮ್ಯಾನ್ ಬಗ್ಗೆಯೂ ಪ್ರಶ್ನಿಸಿದ್ದಾರೆ. ಆದರೆ ಇ.ಡಿ ಪ್ರಶ್ನೆಗೆ ಜಮೀರ್ ಸರಿಯಾದ ಉತ್ತರ ನೀಡಿಲ್ಲ. ಇಷ್ಟೇ ಅಲ್ಲ ಐಎಂಎ ಹಗರಣದ ಆರೋಪಿ ಮಹಮ್ಮದ್ ಹನೀಫ್ ಜೊತೆಗಿನ ವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಾರೆ.